ಭಾರತದಲ್ಲಿ ಮದುವೆಗಳೆಂದರೆ ಭೂರೀ ಭೋಜನದ ಕಾರ್ಯಕ್ರಮಗಳು ಎಂದು ಬಿಡಿಸಿ ಹೇಳಬೇಕಿಲ್ಲ. ಮದುವೆಗಳ ಮೆನುಗಳು ಕಾಲಕಾಲಕ್ಕೆ ಮಾರ್ಪಾಡಾಗುತ್ತಲೇ ಬಂದಿದ್ದು, ಜನರು ತಂತಮ್ಮ ಆರ್ಥಿಕ ಕ್ಷಮತೆಗಳಿಗೆ ಅನುಸಾರವಾಗಿ ಅತಿಥಿಗಳಿಗೆ ಭರ್ಜರಿಯಾಗಿಯೇ ಉಣಬಡಿಸುತ್ತಾರೆ.
90ರ ದಶಕದ ಮದುವೆಯೊಂದರ ಆಮಂತ್ರಣದ ಕಾರ್ಡ್ ಅನ್ನು ಬೆಂಗಾಲೀ ನೆಟ್ಟಿಗರೊಬ್ಬರು ಶೇರ್ ಮಾಡಿಕೊಂಡಿದ್ದಾರೆ. ಈ ಕಾರ್ಡ್‌ನಲ್ಲಿ ಮದುವೆ ಸಮಾರಂಭದ ಭೋಜನ ಕೂಟದ ಮೆನುವಿನ ವಿವರಗಳು ಇವೆ.
ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಪಡಿತರ ಬಿಡುಗಡೆ
ಶಾಖಾಹಾರಿ ಹಾಗೂ ಮಾಂಸಾಹಾರಿ ಭಕ್ಷ್ಯಗಳೆರಡೂ ಇರುವ ಈ ಕಾರ್ಡ್ ನೆಟ್ಟಿಗರನ್ನು ಹಿಂದಿನ ದಿನಗಳಿಗೆ ಕರೆದೊಯ್ಯುತ್ತಿವೆ.
ಬೆಂಗಾಲಿ ಕುಟುಂಬಗಳು ದೇಶೀ ಖಾದ್ಯಗಳನ್ನು ಉಚ್ಛರಿಸುವ ರೀತಿಯಲ್ಲೇ ಅವುಗಳ ಸ್ಪೆಲ್ಲಿಂಗ್ ಅನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ. ಇದೇ ವಿಚಾರ ನೆಟ್ಟಿಗರಿಗೆ ಫನ್ನಿ ವಸ್ತುವಾಗಿ ಕಂಡು ಕಾಮೆಂಟ್ ಸೆಕ್ಷನ್‌ನಲ್ಲಿ ಬಹಳ ಮೋಜಿನ ಕಾಮೆಂಟ್‌ಗಳು ಬಂದಿವೆ.
https://twitter.com/SadMandalorian/status/1411608419749015559?ref_src=twsrc%5Etfw%7Ctwcamp%5Etweetembed%7Ctwterm%5E1411608419749015559%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-in-india%2Fthis-wedding-menu-card-from-the-90s-is-making-netizens-nostalgic-7389727%2F