alex Certify ಈ ನೀರು ನೀಡುತ್ತೆ ಮಲಬದ್ಧತೆಗೆ ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ನೀರು ನೀಡುತ್ತೆ ಮಲಬದ್ಧತೆಗೆ ಪರಿಹಾರ

How to make Jeera Water / Drink for Weight Loss? - All About Diet l Best Dietitian in Bandra l Weight loss diet planಅಜೀರ್ಣ, ಮಲಬದ್ಧತೆ, ಗ್ಯಾಸ್ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಪ್ರತಿ ದಿನ ಕಾಡುವ ಈ ಸಮಸ್ಯೆಗೆ ವೈದ್ಯರ ಬಳಿ ಪದೇ ಪದೇ ಹೋಗಲು ಸಾಧ್ಯವಿಲ್ಲ. ವೈದ್ಯರ ಬಳಿ ಹೋದ್ರೆ ಹಣ ವ್ಯಯವಾಗುತ್ತದೆ ಎಂದು ಕೆಲವರು ಚಿಂತಿಸುತ್ತಾರೆ. ಮತ್ತೆ ಕೆಲವರಿಗೆ ಈ ಹೊಟ್ಟೆ ಸಮಸ್ಯೆಗಳು ಮಾನಸಿಕ ಕಿರಿಕಿರಿಯುಂಟು ಮಾಡುತ್ತವೆ. ಅಡುಗೆ ಮನೆಯಲ್ಲಿರುವ ಎರಡು ಪದಾರ್ಥಗಳನ್ನು ನೀವು ಪ್ರತಿ ದಿನ ಬಳಸಿದ್ರೆ ನಿಮಗೆ ಹೊಟ್ಟೆಯ ಯಾವುದೇ ಸಮಸ್ಯೆ ಕಾಡುವುದಿಲ್ಲ.

ಅಡುಗೆ ಮನೆಯಲ್ಲಿರುವ ಜೀರಿಗೆ ಹಾಗೂ ಓಂಕಾಳು ನಿಮ್ಮ ಹೊಟ್ಟೆ ಸಮಸ್ಯೆಗೆ ಮದ್ದು. ಇದ್ರ ನೀರನ್ನು ಮ್ಯಾಜಿಕ್ ನೀರು ಎಂದು ನೀವು ಕರೆಯಬಹುದು. ಚಯಾಪಚಯ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಇದನ್ನು ಮನೆಯಲ್ಲಿ ಸುಲಭವಾಗಿ ಬಳಸಬಹುದು.

ಒಂದು ಲೋಟ ನೀರನ್ನು ತೆಗೆದುಕೊಳ್ಳಿ. ಅದಕ್ಕೆ ಎರಡು ಚಮಚ ಜೀರಿಗೆ ಹಾಗೂ ಎರಡು ಚಮಚ ಓಂ ಕಾಳನ್ನು ಹಾಕಿ. ರಾತ್ರಿ ನೆನೆಯಲು ಬಿಡಿ. ಬೆಳಿಗ್ಗೆ ಈ ನೀರನ್ನು ಕುಡಿಯಿರಿ. ಬಿಸಿ ಮಾಡಿ ಕೂಡ ಕುಡಿಯಬಹುದು. ರುಚಿ ಹೆಚ್ಚಬೇಕೆಂದ್ರೆ ಇದಕ್ಕೆ ಶುಂಠಿ ರಸ ಅಥವಾ ನಿಂಬೆ ರಸ ಬೆರೆಸಿ ಕುಡಿಯಿರಿ. ಇದು ಹೊಟ್ಟೆಯ ಎಲ್ಲ ರೀತಿಯ ಸಮಸ್ಯೆಗೆ ಮುಕ್ತಿ ನೀಡುತ್ತದೆ. ಇದು ತೂಕ ಇಳಿಸಿಕೊಳ್ಳಲು ಸಹಕಾರಿ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...