
ತಮ್ಮ ಕಂಠಸಿರಿಯಿಂದ ತಮ್ಮೂರಿನವರನ್ನು ಮಂತ್ರಮುಗ್ಧಗೊಳಿಸುತ್ತಾ ಬಂದಿರುವ ಇಶ್ತಿಯಾಕ್, ದೃಷ್ಟಿ ದೋಷವಿರುವ ಅನೇಕ ಮಂದಿಗೆ ಸ್ಪೂರ್ತಿಯಾಗಿದ್ದಾರೆ.
ಅನಂತನಾಗ್ ಜಿಲ್ಲೆಯ ಕೊಕೆರ್ನಾಗ್ ಪ್ರದೇಶದ ಬುಚೂ ಪ್ರದೇಶದ ಪುಟ್ಟ ಗ್ರಾಮವೊಂದರಲ್ಲಿ ಜನಿಸಿದ ಇಶ್ತಿಯಾಕ್, ತಾವು ಬೆಳೆದು ಬಂದ ಹಾದಿಯಲ್ಲಿ ಪಟ್ಟ ಪಾಡುಗಳ ಬಗ್ಗೆ ವಿವರಿಸುತ್ತಾ, “ಚಿಕ್ಕ ವಯಸ್ಸಿನಲ್ಲಿ ನನಗೆ ಏನನ್ನೂ ಮಾಡುವುದಕ್ಕೂ ಕಷ್ಟವಾಗಿತ್ತು. ಆದರೆ ನನ್ನ ಹೆತ್ತವರು ನನ್ನ ಜೀವನದಲ್ಲಿ ಬೇಕಾದ ಸಕಲ ಬೆಂಬಲವನ್ನೂ ಕೊಟ್ಟು, ನಾನು ಕೇಳಿದ್ದನ್ನೆಲ್ಲಾ ಕೊಟ್ಟು ಬೆಳೆಸಿದ್ದಾರೆ” ಎಂದಿದ್ದಾರೆ.
ವರಸೆ ಬದಲಿಸಿದ ತಾಲಿಬಾನ್…! ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸಲು ಮುಂದಾದ ಉಗ್ರರು
“ಬಡ ಕುಟುಂಬದಿಂದ ಬಂದ ನನಗೆ 14ನೇ ವಯಸ್ಸಿನಲ್ಲೇ ಓದು ಬಿಡಬೇಕಾಗಿ ಬಂತು. ನಾನು ಅದಾಗಲೇ ನನ್ನ ಹೆತ್ತವರಿಗೆ ಹೊರೆಯಾಗಿದ್ದೆ. ಓದು ಬಿಟ್ಟ ಬಳಿಕ ನನ್ನಲ್ಲಿ ಮಧುರ ಕಂಠಸಿರಿ ಇದೆ ಎಂದು ನನಗೆ ಅರಿವಾಯಿತು” ಎನ್ನುವ ಇಶ್ತಿಯಾಕ್, “ನಾನು ಯಾರಿಂದಲೂ ತರಬೇತಿ ಪಡೆದಿಲ್ಲ. ಯೂಟ್ಯೂಬ್‌ನಲ್ಲಿ ಹಾಡುಗಳನ್ನು ಕೇಳುವ ನಾನು ಅವುಗಳನ್ನು ಹಾಡಲು ಯತ್ನಿಸುವೆ” ಎಂದು ತಿಳಿಸಿದ್ದಾರೆ. ಕಾಶ್ಮೀರದಲ್ಲಿ ತನ್ನಂಥ ಪ್ರತಿಭಾವಂತರಿಗೆ ಸರ್ಕಾರ ಬೆಂಬಲಕ್ಕೆ ಬರುತ್ತದೆ ಎಂಬ ಆಶಯ ಇಶ್ತಿಯಾಕ್‌ರದ್ದು.