ಈಗಾಗಲೇ ಹಲವಾರು ಮಂದಿ ಕ್ರಿಸ್‌ಮಸ್‌ಗಾಗಿ ಕುಕೀಸ್ ಮತ್ತು ಕೇಕ್‌ಗಳಂತಹ ಸಿಹಿತಿಂಡಿಗಳಿಗಾಗಿ ಕಾತುರದಿಂದ ಕಾಯುತ್ತಿದ್ದರೆ, ದೇಶಿ ಆಹಾರಪ್ರಿಯರು ಹಿಂದಿನಿಂದಿಲೂ ಚಳಿಗಾಲದಲ್ಲಿ ಕಬ್ಬಿನ ರಸದಿಂದ ತಯಾರಿಸಿದ ಬೆಲ್ಲವನ್ನು ತಿನ್ನಲು ಇಷ್ಟಪಡುತ್ತಾರೆ.
ಇದು ಚಳಿಗಾಲದಲ್ಲಿ ಪ್ರತಿಯೊಂದು ಭಾರತೀಯ ಮನೆಯಲ್ಲೂ ಸೇವಿಸುವ ಜನಪ್ರಿಯ ಸಿಹಿತಿಂಡಿಯಾಗಿದೆ. ಇದನ್ನು ತಯಾರಿಸುವ ಬಗೆ ಹೇಗೆ ಎಂಬ ಬಗ್ಗೆ ನಿಮಗೆ ತಿಳಿದಿದೆಯೇ..? ಇದೀಗ ಬೆಲ್ಲ ತಯಾರಿಸುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಫುಡ್ ಬ್ಲಾಗರ್ ವಿಶಾಲ್ ಅವರು ಯೂಟ್ಯೂಬ್‌ನಲ್ಲಿ ಬೆಲ್ಲ ತಯಾರಿಕೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಶೇಷವಾಗಿ ಬೆಲ್ಲವನ್ನು ತಯಾರಿಸುವ ಪ್ರದೇಶವನ್ನು ವಿಶಾಲ್ ತಮ್ಮ ಯೂಟ್ಯೂಬ್ ನಲ್ಲಿ ತೋರಿಸಿದ್ದಾರೆ. ಕಬ್ಬಿನ ರಸವನ್ನು ಹಿಂಡಿದ ನಂತರ, ಕೆಲವು ಸುತ್ತುಗಳ ಶುದ್ಧೀಕರಣದ ಮಾಡಲಾಗುತ್ತದೆ. ನಂತರ, ರಸವನ್ನು ಹೆಚ್ಚಿನ ಜ್ವಾಲೆಯ ಮೇಲೆ ಹಾಕಿ, ಚೆನ್ನಾಗಿ ತಿರುವಲಾಗುತ್ತದೆ.
ಈ ವಿಡಿಯೋ ನೋಡಿದ್ರೆ ಅದು ಹೇಗೆ ಬೆಲ್ಲ ತಯಾರಿಸುತ್ತಾರೆ ಎಂಬ ಬಗ್ಗೆ ನೀವೇ ಅಚ್ಚರಿ ಪಡುತ್ತೀರಿ.. ಈ ವಿಡಿಯೋ ಈಗಾಗಲೇ 88,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ಬೆಲ್ಲವನ್ನು ತಯಾರಿಸುವ ರೀತಿಯನ್ನು ನೋಡಿ ಕೆಲವರು ಆಶ್ಚರ್ಯಪಟ್ಟರೆ, ಇನ್ನೂ ಕೆಲವರು ತಾಜಾ ಬೆಲ್ಲವನ್ನು ಕಂಡು ಬಾಯಲ್ಲಿ ನೀರು ಸುರಿಸಿದ್ದಾರೆ.