ಬೆಕ್ಕುಗಳು ಗಾತ್ರದಲ್ಲಿ ಚಿಕ್ಕದಾಗಿರುತ್ತವೆ ಹಾಗೂ ತೂಕದಲ್ಲಿ ಹಗುರವಾಗಿರುತ್ತವೆ. ಬೆಕ್ಕುಗಳು ನೋಡಲು ಆಕರ್ಷಕವಾಗಿರುತ್ತವೆ ಮತ್ತು ನಿರುಪದ್ರವವಾಗಿ ಕಾಣುತ್ತವೆ. ಬಹುತೇಕರು ಇವನ್ನು ಸಾಕುಪ್ರಾಣಿಯಾಗಿ ಸಾಕುತ್ತಾರೆ. ಬೆಕ್ಕುಗಳು ಬುದ್ಧಿವಂತ ಪ್ರಾಣಿಗಳೂ ಹೌದು. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಬೆಕ್ಕಿನ ಅಸಾಧಾರಣ ಬುದ್ಧಿವಂತಿಕೆಯನ್ನು ತೋರಿಸುತ್ತದೆ.
ವೈರಲ್ ಆಗಿರೋ ವಿಡಿಯೋದಲ್ಲಿ ಬೆಕ್ಕು ಮುಚ್ಚಿದ ಕಿಟಕಿಯನ್ನು ಸ್ಲೈಡ್ ಮಾಡುವ ಮೂಲಕ ತೆರೆಯಲು ಪ್ರಯತ್ನಿಸುತ್ತಿದೆ. ಇದರಿಂದ ಅದು ಒಳಗೆ ಹೋಗುವಲ್ಲಿ ಯಶಸ್ವಿಯಾಗುತ್ತದೆ. ಬೆಕ್ಕು ನಾವು ನಂಬಲಾಗದಂತಹ ಕೆಲಸವನ್ನು ಮಾಡಿದೆ. ಬೆಕ್ಕಿನ ಬುದ್ಧಿವಂತಿಕೆಯನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ.
ಸಾಕುಪ್ರಾಣಿಗಳಾಗಿ ಬೆಕ್ಕುಗಳು ಮನುಷ್ಯರಿಂದ ತುಂಬಾ ಪ್ರೀತಿಸಲ್ಪಡುತ್ತವೆ. ಇವುಗಳು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಅವುಗಳು ಅಸಾಧಾರಣ ಶಸ್ತ್ರಾಸ್ತ್ರಗಳೊಂದಿಗೆ ಶಸ್ತ್ರಸಜ್ಜಿತವಾಗಿರುವಂತೆ ಬೇಟೆಯಾಡುತ್ತವೆ. ಸದ್ಯ, ವಿಡಿಯೋ ವೈರಲ್ ಆಗಿದ್ದು, ಇದಕ್ಕೆ ಹಲವಾರು ಮಂದಿ ಪ್ರತಿಕ್ರಿಯಿಸಿದ್ದಾರೆ.
ಅಂದಹಾಗೆ, ಬೆಕ್ಕುಗಳ ಸಾಮರ್ಥ್ಯ ಕೇಳಿದ್ರೆ ನೀವು ಖಂಡಿತಾ ಬೆರಗಾಗ್ತೀರಾ. ಬೆಕ್ಕುಗಳು ತಮ್ಮ ಎತ್ತರದ ಆರು ಪಟ್ಟು ಎತ್ತರಕ್ಕೆ ಜಿಗಿಯಬಹುದು. ಏಕೆಂದರೆ ಅವುಗಳು ಬಲವಾದ ಕಾಲಿನ ಸ್ನಾಯುಗಳನ್ನು ಹೊಂದಿವೆ. ಬೆಕ್ಕುಗಳಿಗೆ 18 ಕಾಲ್ಬೆರಳುಗಳು, ಅವುಗಳ ಮುಂಭಾಗದ ಪಂಜಗಳಲ್ಲಿ ಐದು ಕಾಲ್ಬೆರಳುಗಳು ಮತ್ತು ಹಿಂಭಾಗದ ಪಂಜಗಳ ಮೇಲೆ ನಾಲ್ಕು ಕಾಲ್ಬೆರಳುಗಳು ಇವೆ.
https://youtu.be/79ivhGaXroA