ತಮ್ಮೆಲ್ಲರೊಂದಿಗೆ ಏಕಕಾಲದಲ್ಲಿ ಡೇಟಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ನ್ಯೂಯಾರ್ಕ್ನ ಮಹಿಳೆಯರು ಪತ್ತೆ ಮಾಡಿದ್ದಾರೆ. ’ವೆಸ್ಟ್ ಎಲ್ಮ್ ಕ್ಯಾಲೆಬ್’ ಎಂಬ ಅಡ್ಡನಾಮಾಂಕಿತನಾದ ಈ ವ್ಯಕ್ತಿಯನ್ನು ಇದೀಗ ಟಿಕ್ಟಾಕ್ನಿಂದ ಹೊರ ಹಾಕಲಾಗಿದೆ.
ಮಿಮಿ ಶೌ ಹೆಸರಿನ ಮಹಿಳೆಯೊಬ್ಬರು ತಮಗೆ ಕೈಕೊಟ್ಟ ಕ್ಯಾಲೆಬ್ ಹೆಸರಿನ ವ್ಯಕ್ತಿಯೊಬ್ಬನ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವೇಳೆ ಕಾಮೆಂಟ್ ಸೆಕ್ಷನ್ನಲ್ಲಿ ಅನೇಕ ಮಹಿಳೆಯರು ಆತ ’ವೆಸ್ಟ್ ಎಲ್ಮ್ ಕ್ಯಾಲೆಬ್ ಹೌದೇ’ ಎಂದು ಕೇಳಿದ್ದಾರೆ. ನ್ಯೂಯಾರ್ಕ್ನಾದ್ಯಂತ ಮಹಿಳೆಯರಿಗೆ ಕೈಕೊಡುತ್ತಾ ಹೆಸರು ಮಾಡಿರುವ ಈತ ಹೀಗೆ ಒಂದೇ ಏಟಿಗೆ ಸಿಕ್ಕಿಬಿದ್ದಿದ್ದಾನೆ.
ಇಲ್ಲಿದೆ ಆರೋಗ್ಯಕರ ‘ಕರಿಬೇವಿನ ಚಟ್ನಿ ಪುಡಿ’ ಮಾಡುವ ವಿಧಾನ
ವಾಸ್ತವದಲ್ಲಿ ಮಿಮಿ ಶೌ ನೋಡುತ್ತಿದ್ದುದ್ದು ಬೇರೆಯ ಕ್ಯಾಲೆಬ್ ಆದರೂ ತೀವ್ರ ಕುತೂಹಲದಿಂದ ಈ ವಿಚಾರವಾಗಿ ಇನ್ನಷ್ಟು ಕೆದಕಿ ನೋಡಿ, ಇಷ್ಟು ಮಹಿಳೆಯರಿಗೆ ವಂಚನೆಯೆಸಗಿದ ಆತನನ್ನು ಕಂಡುಕೊಳ್ಳಲು ಯತ್ನಿಸಿದ್ದಾರೆ.
ಡೇಟಿಂಗ್ ಅಪ್ಲಿಕೇಶನ್ ಹಿಂಜ್ನಲ್ಲಿ ಕ್ಯಾಲೆಬ್ನೊಂದಿಗೆ ಮ್ಯಾಚಿಂಗ್ ಆದ ಮೇಲೆ ಆತನಿಂದ ವಂಚನೆಗೆ ಒಳಗಾಗಿರುವ ವಿಚಾರವಾಗಿ ಅನೇಕ ಮಹಿಳೆಯರು ಮಾತನಾಡಿದ ಬಳಿಕ, ಆತನಿಂದ ದೂರ ಉಳಿಯಲು ಮಹಿಳೆಯರಿಗೆ ವಾರ್ನಿಂಗ್ ಕೊಟ್ಟು ಶೌ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.
ಇದೇ ವೇಳೆ, ಖೇಟ್ ಗಲ್ವಾನ್ ಹೆಸರಿನ ಮಹಿಳೆಯೊಬ್ಬರು ವೆಸ್ಟ್ ಎಲ್ಮ್ ಕ್ಯಾಲೆಬ್ ಹೆಸರಿನ ವ್ಯಕ್ತಿಯೊಂದಿಗೆ ತಾವೂ ಸಹ ಡೇಟಿಂಗ್ ಮಾಡಿದ್ದ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಶೌರ ವಿಡಿಯೋದಲ್ಲಿ ಟ್ಯಾಗ್ ಆಗಿದ್ದಾರೆ.
ಕೆಲ್ಲಿ ಹೆಸರಿನ ಮಹಿಳೆಯೊಬ್ಬರಿಂದ ಸಂದೇಶದ ಸ್ವೀಕರಿಸಿದ ಗಲ್ವನ್ಗೆ, ಕ್ಯಾಲೆಬ್ ಆಕೆಗೂ ಕೈಕೊಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಶನಿವಾರ ಬೆಳಿಗ್ಗೆ ಕೆಲ್ಲಿ ಜೊತೆಗಿದ್ದ ಕ್ಯಾಲೆಬ್ ಅದೇ ದಿನ ಮದ್ಯಾಹ್ನ ಗಲ್ವನ್ ಜೊತೆಗೆ ಕಾಲ ಕಳೆದಿದ್ದಾನೆ.
ಗಲ್ವನ್ರ ವಿಡಿಯೋ ವೈರಲ್ ಆಗಿ, ’ವೆಸ್ಟ್ ಎಲ್ಮ್ ಕ್ಯಾಲೆಬ್’ನ ಇನ್ನಷ್ಟು ವಿಡಿಯೋಗಳು ಹೀಗೇ ಕಂಡು ಬರಲಾರಂಭಿಸಿವೆ.
https://twitter.com/i/status/1483893455927582722