ಇಬ್ಬರು ಪುಟ್ಟ ಹುಡುಗರು ಹುಡುಗಿಯೊಬ್ಬಳ ಮನ ಗೆಲ್ಲಲು ಪ್ರಯತ್ನಿಸುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ.
ಪುಟ್ಟ ಹುಡುಗರ ವಯಸ್ಸು ಮೂರ್ನಾಲ್ಕು ವರ್ಷದೊಳಗಿರಬಹುದು. ಅವರಿಬ್ಬರೂ ಮೈದಾನದಲ್ಲಿ ಆಟವಾಡುತ್ತಿರುವಾಗ ಅವರಿಗಿಂತ ಕೊಂಚ ಕಿರಿಯ ವಯಸ್ಸಿನ ಹುಡುಗಿಯ ಮನ ಗೆಲ್ಲಲು ಪ್ರಯತ್ನಿಸುತ್ತಿರುವ ಪ್ರಸಂಗ ಕ್ಯಾಮರಾದಲ್ಲಿ ಸೆರೆಯಾಗಿದೆ.
ವೈರಲ್ ಆಗಿರುವ ವಿಡಿಯೋವನ್ನು ಜೆನ್ನಿಫರ್ ಬಾರ್ಬರ್ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, 2 ಮಿಲಿಯನ್ ವೀಕ್ಷಣೆ ಕಂಡಿದ್ದು, ಸಾವಿರಾರು ಮಂದಿ ರಸಮಯ ಕಾಮೆಂಟ್ ಮಾಡಿದ್ದಾರೆ.
ಈ ಮುದ್ದಾದ ವಿಡಿಯೊದಲ್ಲಿ ಆ ಇಬ್ಬರು ಹುಡುಗರ ನಡುವೆ “ಹೋರಾಟ”ವೇ ನಡೆಯುತ್ತದೆ. ಒಬ್ಬ ಹುಡುಗ ಮೊಣಕಾಲಿನ ಮೇಲೆ ಕುಳಿತುಕೊಳ್ಳುವುದು, ಹುಡುಗಿಯನ್ನು ತಬ್ಬಿಕೊಳ್ಳುವುದು ಕಾಣಿಸುತ್ತದೆ.
ಆದರೆ ಇನ್ನೊಬ್ಬನು ತಬ್ಬಿಕೊಂಡವನನ್ನು ನಿಧಾನವಾಗಿ ದೂರ ತಳ್ಳುತ್ತಾನೆ, ಈ ವೇಳೆ ಹುಡುಗಿ ನೆಲಕ್ಕೆ ಬಿದ್ದಿದ್ದಾಳೆ. ದೂರ ತಳ್ಳಿದ ಹುಡುಗನೇ ಆಕೆಗೆ ಎದ್ದೇಳಲು ಸಹಾಯ ಮಾಡಿದ್ದು, ಈ ಸಂದರ್ಭದ ವಿಡಿಯೋ ನೋಡುಗರ ಹುಬ್ಬೇರುವಂತೆ ಮಾಡುತ್ತದೆ.
ಹುಡುಗರು ಚಿಕ್ಕವಯಸ್ಸಿನಲ್ಲಿ ಯಾವ ರೀತಿ ಪೈಪೋಟಿಗಿಳಿಯುತ್ತಾರೆ ಎಂಬುದರ ಬಗ್ಗೆ ಅನೇಕರು ತಮ್ಮ ಮೂಗಿನ ನೇರಕ್ಕೆ ಹಾಸ್ಯಮಯ ಕಾಮೆಂಟ್ ಮಾಡಿದ್ದಾರೆ.