
ಡೋರೇಮಾನ್ ಕಾರ್ಟೂನ್‌ಗೆ ಮೊರೆ ಹೋದವರು ಮಕ್ಕಳು ಮಾತ್ರವಲ್ಲ, ದೊಡ್ಡವರು ಕೂಡ. ಅದರದ್ದೇ ಹೊಸ ಆವೃತ್ತಿಯ ವಿಡಿಯೋ ಒಂದು ವೈರಲ್ ಆಗಿದೆ. ಇದರಲ್ಲಿ ಸ್ನೇಹಿತರ ಗುಂಪು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದು, ಡೋರೇಮನ್‌ನ ಥೀಮ್ ಹಾಡಿನ ಹಿಂದಿ ಆವೃತ್ತಿಯನ್ನು ಹಾಡುವುದನ್ನು ನೋಡಬಹುದಾಗಿದೆ.
ಡೋರೇಮನ್‌ನ ಹಿಂದಿ ಥೀಮ್ ಸಾಂಗ್ ಅನ್ನು ಅಪಾರ ಉತ್ಸಾಹದಿಂದ ಯುವಕರ ಗುಂಪು ಹಾಡುತ್ತಿದ್ದು, ಇದನ್ನು ನೆಟ್ಟಿಗರು ತುಂಬಾ ಇಷ್ಟಪಟ್ಟಿದ್ದಾರೆ. ಪ್ರಿಯದರ್ಶನ್ ಎನ್ನುವವರು ವಿಡಿಯೋದ ಪಠ್ಯವನ್ನು ಸಿದ್ಧಪಡಿಸಿದ್ದಾರೆ. 2022 ಮುಗಿಯುತ್ತಾ ಬಂದರೂ ಇಂದಿಗೂ ನಾವು ಈ ಹಾಡಿನ ಗೀಳನ್ನು ಹೊಂದಿದ್ದೇವೆ ಎಂದು ಅವರು ಶೀರ್ಷಿಕೆ ಕೊಟ್ಟಿದ್ದಾರೆ.
ಈ ಹಿಂದಿ ಆವೃತ್ತಿಗೆ ನೆಟ್ಟಿಗರು ಫಿದಾ ಆಗಿದ್ದು, ಇದಾಗಲೇ 7.1 ಲಕ್ಷಕ್ಕೂ ಅಧಿಕ ಮಂದಿ ಇದರ ವೀಕ್ಷಣೆ ಮಾಡಿದ್ದಾರೆ. ಹಲವು ಪಾಲಕರು ತಮ್ಮ ಮಕ್ಕಳಿಗೂ ಇದನ್ನು ತೋರಿಸಿ ಇಷ್ಟಪಟ್ಟಿದ್ದಾರೆ. ಈ ಕುರಿತು ಕಮೆಂಟ್ ಮಾಡಿರುವ ಹಲವರು, ಈ ಮಾಹಿತಿಯನ್ನು ಶೇರ್ ಮಾಡಿಕೊಂಡಿದ್ದಾರೆ.