ನಮ್ಮ ಮೆಚ್ಚಿನ ಪ್ರಾಣಿಗಳನ್ನು ಹತ್ತಿರದಿಂದ ಕಾಣಲು ಮೃಗಾಲಯಗಳಿಗೆ ನಾವೆಲ್ಲಾ ಒಂದಲ್ಲ ಒಂದು ಬಾರಿ ಮೃಗಾಲಯಗಳಿಗೆ ಹೋಗಿಯೇ ಇರುತ್ತೇವೆ. ಬಹಳಷ್ಟು ಮೃಗಾಲಯಗಳಲ್ಲಿ ದೊಡ್ಡ ಬೆಕ್ಕುಗಳನ್ನು ಅವುಗಳ ಗಾತ್ರಕ್ಕೆ ಹೋಲಿಸಿದಾಗ ತೀರಾ ಸಣ್ಣ ಜಾಗಗಳಲ್ಲಿ ಇರಿಸಿರುತ್ತಾರೆ. ಆದರೆ ಕೆಲವೊಂದು ಮೃಗಾಲಯಗಳು ಈ ದೊಡ್ಡ ಬೆಕ್ಕುಗಳಿಗೆ ಅಪಾರ ಪ್ರಮಾಣದಲ್ಲಿ ಜಾಗಗಳನ್ನು ಮಾಡಿರುತ್ತವೆ.
ಇಂಥದ್ದೇ ಮೃಗಾಲಯವೊಂದರಲ್ಲಿ ಸಫಾರಿ ಮಾಡುತ್ತಿದ್ದ ವ್ಯಾನ್ ಒಂದರ ಮೇಲೆ ಹುಲಿಗಳು ತಪಾಸಣೆಗೆ ಮುಂದಾಗಿರುವ ವಿಡಿಯೋವೊಂದು ವೈರಲ್ ಆಗಿದೆ. ಸಫಾರಿ ವಾಹನದಲ್ಲಿದ್ದ ಪ್ರವಾಸಿಗರು ಚಿತ್ರಗಳನ್ನು ಸೆರೆ ಹಿಡಿಯಲು ಮುಂದಾಗುತ್ತಲೇ ಚೇಷ್ಟೆ ಸ್ವಭಾವದ ಹುಲಿಯೊಂದು ಸಫಾರಿ ವ್ಯಾನ್‌ನ ಕಿಟಕಿಯನ್ನು ಹಿಡಿದುಕೊಂಡು ನಾಲ್ಕು ಹೆಜ್ಜೆ ಹಾಕಿದೆ.
ಹುಲಿಗೇನೋ ಮಜ ಕೊಟ್ಟ ಈ ಘಟನೆ ವ್ಯಾನಿನೊಳಗಿದ್ದ ಪ್ರವಾಸಿಗರಿಗೆ ಒಂದು ಕ್ಷಣ ಜೀವ ಬಾಯಿಗೆ ಬಂದಂತೆ ಮಾಡಿಸಿದೆ.