ನೀವು ಬಹಳ ಬೇಸರದಲ್ಲಿದ್ದೀರಾ ಅಥವಾ ಏನಾದರೂ ಚಿಂತೆ ಮಾಡುತ್ತಿದ್ದೀರಾ..? ನಿಮ್ಮ ದುಃಖವನ್ನು ಮರೆಮಾಡಲು ಈ ವಿಡಿಯೋ ನೋಡಿ.. ಇದನ್ನು ನೋಡಿದ್ರೆ ನಿಮ್ಮ ಮನಸ್ಸು ರಿಲಾಕ್ಸ್ ಆಗೋದ್ರಲ್ಲಿ ಸಂಶಯವೇ ಇಲ್ಲ.
ಹೌದು, ಆನ್‌ಲೈನ್‌ನಲ್ಲಿ ಮುದ್ದಾದ ನಾಯಿಮರಿಯ ವಿಡಿಯೋ ವೈರಲ್ ಆಗಿದೆ. ನಾಯಿಮರಿಗಳೆಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ..? ಅವು ಮಾಡುವ ಆಟ, ತುಂಟಾಟಗಳು ಬಹಳ ಮುದ್ದಾಗಿರುತ್ತವೆ. ಇದೀಗ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋ ವೈರಲ್ ಆಗಿದೆ. ನಾಯಿಮರಿಯೊಂದು ಕ್ಯಾಮರಾ ನೋಡಿ ನಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅದರ ಕಂದು ಕಣ್ಣುಗಳು ಮತ್ತು ರೋಮದಿಂದ ಕೂಡಿದ ಮೋಹಕತೆಯು ಖಂಡಿತವಾಗಿಯೂ ನಿಮ್ಮ ಹೃದಯವನ್ನು ಕದಿಯುತ್ತದೆ.
ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ಈ ವಿಡಿಯೋ ಸುಮಾರು 4 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ. ವಿಡಿಯೋ ನೋಡಿದ ನೆಟ್ಟಿಗರಂತೂ ಮೈ ಮರೆತಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಶ್ವಾನವನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ.
https://twitter.com/buitengebieden/status/1529508885173772291?ref_src=twsrc%5Etfw%7Ctwcamp%5Etweetembed%7Ctwterm%5E1529508885173772291%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-video-of-a-super-cute-puppy-smiling-on-camera-is-all-you-need-to-watch-today-viral-1954537-2022-05-26