ನವದೆಹಲಿ: ಕೆಲವರಿಗೆ ಹುಚ್ಚು ಸಾಹಸ ಮಾಡಿಯಾದರೂ ಪ್ರಸಿದ್ಧಿಗೆ ಬರುವ ಹಂಬಲವಾದರೆ, ಇನ್ನು ಕೆಲವರಿಗೆ ದಾಖಲೆ ಮಾಡುವ ಆಸೆ. ಇದಕ್ಕಾಗಿ ಅವರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಅಂಥದ್ದೇ ಒಂದು ಮೈ ಝುಂ ಎನ್ನಿಸುವ ಸಾಹಸಮಯ ವಿಡಿಯೋ ಒಂದು ವೈರಲ್ ಆಗಿದೆ.
ದೆಹಲಿಯ ಜುಹು ಬೀಚ್ನಲ್ಲಿ ಯುವಕನೊಬ್ಬ 42 ಬಾರಿ ಬ್ಯಾಕ್ಫ್ಲಿಪ್ ಮಾಡುವ ಮೂಲಕ ಅಚ್ಚರಿಗೊಳಿಸಿದ್ದಾನೆ, ಸಲ್ಮಾ ನ್ ಖಾನ್ ಎಂಬ ಈ ಯುವಕನ ಸಾಹಸಕ್ಕೆ ನೆಟ್ಟಿಗರು ಹುಬ್ಬೇರಿಸುತ್ತಿದ್ದಾರೆ.
ಬ್ಯಾಕ್ಫ್ಲಿಪ್ ಮಾಡುವುದು ಅತ್ಯಂತ ಸಾಹಸದ ಕೆಲಸ. ಸಾಮಾನ್ಯವಾಗಿ ಅನೇಕ ಮಂದಿ 2-3 ಬಾರಿ ಮಾಡಲಷ್ಟೇ ಸಾಧ್ಯ. ಆದರೆ ನಿರಂತರ ಅಭ್ಯಾಸ ಹಾಗೂ ಛಲದಿಂದಾಗಿ ಸಲ್ಮಾನ್ ಖಾನ್ ಈ ಸಾಧನೆ ಮಾಡಿದ್ದಾನೆ. ಇದು ಅತ್ಯಂತ ಕ್ಲಿಷ್ಟಕರವಾದ ಸಾಹಸವಾಗಿದ್ದು, ಫ್ಲಿಪ್ ಮಾಡುವ ವೇಳೆ ಸ್ವಲ್ಪ ಸ್ವಲ್ಪ ಎಡವಿದರೂ ಕುತ್ತಿಗೆ ಅಥವಾ ಬೆನ್ನು ಮೂಳೆಗೆ ಗಂಭೀರ ಗಾಯವಾಗುವ ಸಾಧ್ಯತೆ ಇರುತ್ತದೆ.
ಆದ್ದರಿಂದ ಇಂಥ ಸಾಹಸಕ್ಕೆ ಕೈಹಾಕುವ ಮುನ್ನ ಯೋಚಿಸಿ ಹೆಜ್ಜೆ ಇಡಿ. ಈತನ ಸಾಹಸ ನೋಡಿ ತಾವೂ ಮಾಡಲು ಹೋಗುವುದು ಅಪಾಯ ಎಂದು ನೆಟ್ಟಿಗರು ಕಮೆಂಟ್ನಲ್ಲಿ ಎಚ್ಚರಿಕೆ ನೀಡುತ್ತಿದ್ದಾರೆ. ಈ ವಿಡಿಯೋ 45 ಮಿಲಿಯನ್ಗೂ ಅಧಿಕ ವೀಕ್ಷಣೆ ಕಂಡಿದೆ,