alex Certify Video | ಉಸಿರು ಬಿಗಿ ಹಿಡಿಯುವಂತೆ ಮಾಡುತ್ತೆ ಬಲ್ಬ್‌ ಬದಲಾಯಿಸಲು ಈತ ಮಾಡುವ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video | ಉಸಿರು ಬಿಗಿ ಹಿಡಿಯುವಂತೆ ಮಾಡುತ್ತೆ ಬಲ್ಬ್‌ ಬದಲಾಯಿಸಲು ಈತ ಮಾಡುವ ಕೆಲಸ

1,500 ಅಡಿ ಎತ್ತರದ ಗೋಪುರವನ್ನು ಹತ್ತುವುದನ್ನು ನೀವು ಊಹಿಸಬಲ್ಲಿರಾ? ಕೆಲವರಿಗೆ ಇದೊಂದು ಸಾಹಸದ ಕೆಲಸ ಆಗಿರಬಹುದು. ಯಾವಾಗಲಾದರೂ ಒಮ್ಮೆ ಈ ಸಾಹಸವನ್ನು ಕೈಗೊಳ್ಳಬಹುದು.

ಆದರೆ ನಾವು ಹೇಳಹೊರಟಿರುವುದು ಇಂಥ ಸಾಹಸಿಗರ ಕುರಿತಲ್ಲ. ಬದಲಿಗೆ ಇಲ್ಲೊಬ್ಬ ವ್ಯಕ್ತಿ ಆರು ತಿಂಗಳಿಗೊಮ್ಮೆ 1,500 ಅಡಿ ಸಂವಹನ ಗೋಪುರವನ್ನು ಹತ್ತುತ್ತಾರೆ ! ಹೌದು. ಟವರ್ ಕ್ಲೈಂಬರ್ ಕೆವಿನ್ ಸ್ಮಿತ್ ಅವರು ಈ ಕಾರ್ಯವನ್ನು ಮಾಡುತ್ತಾರೆ. ಇದಕ್ಕೆ ಕಾರಣ ಬಲ್ಬ್ ಬದಲಾಯಿಸುವುದು.

ಸಿಯೋಕ್ಸ್ ಫಾಲ್ಸ್ ಟವರ್ ಮತ್ತು ಕಮ್ಯುನಿಕೇಷನ್ಸ್‌ನಲ್ಲಿ ಇದು ಸ್ಮಿತ್ ಅವರ ಕೆಲಸದ ಒಂದು ಭಾಗವಾಗಿದೆ. ಪ್ರತಿಯೊಂದು ಸಲ ಅವರು ಹತ್ತುವಾಗ $20,000 (ಸುಮಾರು ರೂ. 16.5 ಲಕ್ಷ) ಮೊತ್ತವನ್ನು ಪಡೆಯುತ್ತಾರೆ.

ಇದು ಹೆಚ್ಚು ಎನಿಸಬಹುದು. ಆದರೆ ಪ್ರಾಣವನ್ನು ಪಣಕ್ಕಿಟ್ಟು ಇಂಥ ಸಾಹಸಗಳನ್ನು ಮಾಡಲು ಯಾರೂ ಧೈರ್ಯ ಮಾಡುವುದಿಲ್ಲ. ವೈರಲ್‌ ವಿಡಿಯೋದಲ್ಲಿ ಅವರು, ದೂರದರ್ಶನ ಪ್ರಸಾರದ ಆಂಟೆನಾದ ಮೇಲ್ಭಾಗದಲ್ಲಿ ಲೈಟ್ ಬಲ್ಬ್ ಅನ್ನು ಬದಲಾಯಿಸುತ್ತಿರುವುದನ್ನು ಕಾಣಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...