ಎಷ್ಟೋ ಎಲೆಮರೆ ಕಾಯಿಯಂತಿರುವ ಪ್ರತಿಭೆಗಳು, ಸೋಶಿಯಲ್ ಮೀಡಿಯಾ ಮೂಲಕ ಬೆಳಕಿಗೆ ಬಂದಿದ್ದಾರೆ. ಅಂತಹ ಅದ್ಬುತ ಪ್ರತಿಭೆಗಳಲ್ಲಿ ಶ್ರೇಯಾ ಬಸು ಕೂಡಾ ಒಬ್ಬರು. ಈಗ ಇವರು ಸುಶ್ರಾವ್ಯವಾಗಿ ಹಾಡಿರುವ “ ಮೇರೆ ಢೋಲನಾ “ ಹಾಡು ವೈರಲ್ ಆಗಿದ್ದು, ಇದನ್ನ ಕೇಳಿದ ನೆಟ್ಟಿಗರು ಇವರ ಕಂಠಸಿರಿಗೆ ಫುಲ್ ಫಿದಾ ಆಗ್ಹೋಗಿದ್ದಾರೆ. ಶ್ರೇಯಾ ಬಸು ಹಾಡಿರುವ ಈ ಹಾಡನ್ನ ಈಗಾಗಲೇ 9 ಮಿಲಿಯನ್ ಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ.
ಅಕ್ಷಯ್ ಕುಮಾರ್ ನಟನೆಯ ಈ ಬಾಲಿವುಡ್ ಸಿನೆಮಾ “ಭೂಲ್ ಭುಲೈಯಾ“ ದ ಈ ಹಿಟ್ ಹಾಡು “ ಮೇರೆ ಢೋಲನಾ“ ಈ ಹಾಡನ್ನ ಕೇಳದ ಸಂಗೀತ ಪ್ರೇಮಿಯೇ ಇಲ್ಲ. ಶ್ರೇಯಾ ಘೋಷಾಲ್ ಅಷ್ಟು ಅದ್ಭುತವಾಗಿ ಹಾಡಿದ್ದರು. ಇದೇ ಹಾಡನ್ನ ಈಗ ಶ್ರೇಯಾ ಬಸು ಹಾಡಿ ಇದನ್ನ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಶಾಕಿಂಗ್ ವಿಚಾರ ಏನಂದ್ರೆ ಈ ಹಾಡನ್ನ ಮಧ್ಯರಾತ್ರಿ 3ಗಂಟೆಗೆ ಕಾರ್ ಬೇಸ್ಮೆಂಟ್ನಲ್ಲಿ ಹಾಡಿದ್ದಾರೆ.
“ಭೂಲ್ ಭುಲೈಯಾ“ ಮೊದಲೇ ಭೂತ, ಪ್ರೇತಗಳ ಕಥೆ ಆಧಾರಿತ ಚಲನಚಿತ್ರ. ಈ ಸಿನೆಮಾ ನೋಡಿ ಗಾಯಕಿ ಶ್ರೇಯಾಬಸು ಮಧ್ಯರಾತ್ರಿ, ಪ್ರೇತಗಳಿಗೆಂದೇ ಈ ಹಾಡು ಹಾಡಿರಬಹುದಾ ? ಅಂತ ಕೆಲ ನೆಟ್ಟಿಗರು ತಮಾಷೆ ಮಾಡಿದ್ದಾರೆ.
ಶ್ರೇಯಾಬಸು 2016ರಲ್ಲಿ ವಾಯ್ಸ್ ಆಫ್ ಇಂಡಿಯಾ ಅನ್ನೋ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ಇವರು ಅಂತಿಮ ಹಂತದವರೆಗೆ ತಲುಪಿದ್ದರು. ಈಗ ಈ ಹಾಡನ್ನ ಹಾಡಿರುವ ವಿಡಿಯೋ, ಜೊತೆಗೆ “ ನೀವು ಮಧ್ಯರಾತ್ರಿ ಹಾಡಿದರೆ ಹೇಗಿರುತ್ತೆ” ಅಂತ ಕೂಡಾ ಬರೆದುಕೊಂಡಿದ್ದಾರೆ.
ಇನ್ನೂ ಕಾಮೆಂಟ್ ಬಾಕ್ಸ್ನಲ್ಲಿ ಕೆಲವರು ಶ್ರೇಯಾ ಅವರ ದನಿ ಕೇಳಿ ಹೊಗಳಿದರೆ ಇನ್ನೂ ಕೆಲವರು ಯಾರಾದರೂ ಮಧ್ಯರಾತ್ರಿ ನೀರು ಕುಡಿಯೋದಕ್ಕಂತ ಎದ್ದಿದ್ದೇ ಆಗಿದ್ದರೆ ಈ ದನಿ ಕೇಳಬಹುದಿತ್ತು ಅಂತ ಬರೆದಿದ್ದಾರೆ.
ಇನ್ನೊಬರು ಮಧ್ಯರಾತ್ರಿ ನಿದ್ದೆಯಿಂದ ಎಚ್ಚರವಾಗಿದ್ದವನು ಈ ದನಿ ಕೇಳಿದ್ರೆ ಬೆಚ್ಚಿಬಿದ್ದಿರಬಹುದು ಎಂದು ಬರೆದಿದ್ದಾರೆ. ಒಟ್ಟಿನಲ್ಲಿ ಶ್ರೇಯಾ ಈ ಹಾಡು ಹೇಳುವ ಮೂಲಕ ಅನೇಕರ ಹೃದಯ ಗೆದ್ದಿದಂತೂ ಸುಳ್ಳಲ್ಲ.