ಬದಲಾಗುತ್ತಿರುವ ಜೀವನಶೈಲಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ಆರೋಗ್ಯಕರ ಅಭ್ಯಾಸ ಮತ್ತು ಆಹಾರಗಳಿಂದ ಮಾತ್ರ ಇದು ಸಾಧ್ಯ. ಇವುಗಳನ್ನು ಆರಿಸಿಕೊಂಡರೆ ರೋಗಗಳು ನಮ್ಮಿಂದ ದೂರ ಉಳಿಯುತ್ತವೆ.
ಆರೋಗ್ಯಕರ ಜೀವನವನ್ನು ಕಾಪಾಡಿಕೊಳ್ಳಲು ಮೊದಲನೆಯದಾಗಿ ಆಹಾರಕ್ರಮಕ್ಕೆ ವಿಶೇಷ ಗಮನ ನೀಡಬೇಕು. ಇದರಿಂದ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯದಿಂದ ದೂರವಿರಬಹುದು.
ಕೆಲವು ಮನೆಮದ್ದುಗಳು ಮತ್ತು ಸುಲಭವಾದ ಪರಿಹಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ಅವುಗಳಲ್ಲೊಂದು ಕೊತ್ತಂಬರಿ ಸೊಪ್ಪು. ಆಹಾರದ ರುಚಿ ಮತ್ತು ಪರಿಮಳವನ್ನು ಹೆಚ್ಚಿಸಲು ಕೊತ್ತಂಬರಿ ಸೊಪ್ಪನ್ನು ಹೆಚ್ಚಾಗಿ ಬಳಸಲಾಗುತ್ತದೆ.
ಸಾಮಾನ್ಯವಾಗಿ ಪ್ರತಿ ತಿಂಡಿ-ತಿನಿಸುಗಳಲ್ಲಿಯೂ ಕೊತ್ತಂಬರಿ ಸೊಪ್ಪನ್ನು ಬಳಸುತ್ತೇವೆ. ಆದರೆ ಸರಳವಾಗಿ ಕಾಣುವ ಈ ಎಲೆಗಳು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದು ಅನೇಕರಿಗೆ ತಿಳಿದಿಲ್ಲ.
ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಇದ್ದರೆ ಕೊತ್ತಂಬರಿ ಸೊಪ್ಪನ್ನು ತಪ್ಪದೇ ಸೇವಿಸಿ. ಕೊತ್ತಂಬರಿ ಸೊಪ್ಪು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ. ವಾಸ್ತವವಾಗಿ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಳದಿಂದಾಗಿ ಅನೇಕ ರೀತಿಯ ಗಂಭೀರ ಕಾಯಿಲೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.
ಕೊತ್ತಂಬರಿ ಸೊಪ್ಪು ಅಥವಾ ಧನಿಯಾ ಬೀಜಗಳನ್ನು ಬಳಸಿಕೊಂಡು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಬಹುದು. ಕೊತ್ತಂಬರಿ ಬೀಜಗಳು ನೈಸರ್ಗಿಕ ಸಂಯುಕ್ತ ಕುಟುಂಬದಿಂದ ಬಂದಿವೆ. ಇದು ಸೂಪರ್‌ಫುಡ್ಗಳಲ್ಲೊಂದು. ಕೊತ್ತಂಬರಿ ಸೊಪ್ಪು ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್‌ನಲ್ಲಿ ಸಮೃದ್ಧವಾಗಿದೆ, ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೃದ್ರೋಗದ ಅಪಾಯವನ್ನು ಕೂಡ ಕೊತ್ತಂಬರಿ ಸೊಪ್ಪು ಕಡಿಮೆ ಮಾಡಬಲ್ಲದು.
ಕೊತ್ತಂಬರಿ ಸೊಪ್ಪನ್ನು ಸಲಾಡ್‌ನಲ್ಲಿ ಸಹ ಬೆರೆಸಿ ತಿನ್ನಬಹುದು. ಸೂಪ್ಗೆ ಕೂಡ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಕುಡಿದರೆ ರುಚಿ ದುಪ್ಪಟ್ಟಾಗುತ್ತದೆ. ಪ್ರತಿದಿನ ಹಸಿರು ಕೊತ್ತಂಬರಿ ಸೊಪ್ಪನ್ನು ಸೇವಿಸುವ ಮೂಲಕ ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಿ.