ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ ನಿಮ್ಮ ಹೃದಯವು ಉತ್ತಮ ಸ್ಥಿತಿಯಲ್ಲಿದೆ ಎಂದು ತಜ್ಞರು ಹೇಳುತ್ತಾರೆ. ಆದರೆ ಇಲ್ಲೊಂದು ರೆಸ್ಟೋರೆಂಟ್ ವಿಚಿತ್ರಕ್ಕೆ ಹೆಸರಾಗಿದೆ. ಅಮೆರಿಕದ ಈ ರೆಸ್ಟಾರೆಂಟ್ ಹಾರ್ಟ್ ಅಟ್ಯಾಕ್ ಗ್ರಿಲ್ ರೆಸ್ಟೋರೆಂಟ್ ಎಂದೇ ಖ್ಯಾತಿ ಪಡೆದಿದೆ.
ಇದರ ವಿಶೇಷತೆ ಏನೆಂದರೆ, ಇಲ್ಲಿ “ಕ್ವಾಡ್ರುಪಲ್ ಬೈಪಾಸ್ ಬರ್ಗರ್” ಮತ್ತು “ಫ್ಲಾಟ್‌ಲೈನರ್ ಫ್ರೈಸ್” ನಂತಹ ಅನಾರೋಗ್ಯಕರ ಎಂದೇ ಬಿಂಬಿಸಲಾಗುವ ಆಹಾರಗಳನ್ನು ಕೆಲವರಿಗೆ ಉಚಿತವಾಗಿ ನೀಡಲಾಗುತ್ತದೆ. ಅದು ಯಾಕೆ ಅಂತೀರಾ? 350 ಪೌಂಡ್‌ಗಳಿಗಿಂತ ಹೆಚ್ಚು (ಅಂದರೆ 158 ಕಿಲೋಗ್ರಾಂಗಳಿಗಿಂತ ಹೆಚ್ಚು) ತೂಕದ ಗ್ರಾಹಕರಿಗೆ ಉಚಿತ ಊಟವನ್ನು ನೀಡುತ್ತಿದೆ!
ಈ ಹೆಚ್ಚಿನ ಕ್ಯಾಲೋರಿ ಉಪಾಹಾರ ತಿಂದರೆ ಆರೋಗ್ಯದಲ್ಲಿ ಏರುಪೇರಾಗುವುದು ಖಂಡಿತ ಎನ್ನುವುದು ಇಲ್ಲಿಯ ನಿವಾಸಿಗಳ ಆಕ್ರೋಶ. ಇಂಥ ಪದಾರ್ಥಗಳನ್ನು ತಿಂದು ದಢೂತಿ ದೇಹ ಹೊಂದಿರುವವರಿಗೆ ಪುನಃ ಉಚಿತ ಆಹಾರ ನೀಡುವ ಮೂಲಕ ಈ ರೆಸ್ಟೋರೆಂಟ್ ಕುಖ್ಯಾತಿ ಗಳಿಸಿದೆ ! ಇದರ ವಿಡಿಯೋ ವೈರಲ್ ಆಗಿದೆ.