ಲೈಲಾ-ಮಜ್ನು, ರೋಮಿಯೊ-ಜುಲಿಯೆಟ್, ಇವರ ಪ್ರೇಮ ಕಥೆಗಳು ಯಾರಿಗೆೆ ತಿಳಿದಿಲ್ಲ ? ಯುವ ಪ್ರೇಮಿಗಳಿಗೆ ಇವರೇ ಮಾದರಿ. ಆದರೆ ಕೆಲ ಪ್ರೇಮಿಗಳಿರುತ್ತಾರೆ. ಅವರ ಪ್ರೇಮ ಕಥೆಗಳನ್ನ ಕೇಳಿದ್ರನೇ ಇಂಥಾ ಹುಚ್ಚುರಿರ್ತಾರಾ ಎಂದು ನಾವು ಶಾಕ್ ಆಗ್ಬಿಡ್ತೇವೆ. ಅಂಥಾ ಒಬ್ಬ ಹುಚ್ಚು ಪ್ರೇಮಿ ಅಮೆರಿಕಾದ ಫ್ಲೋರಿಡಾದಲ್ಲಿ ಇದ್ದ. ಆತನ ಹೆಸರು ಡಾ.ಡೆತ್
ಡಾ. ಡೆತ್ ಅಸಲಿ ಹೆಸರು ಕಾರ್ಲ್ ಟಾಂಜರ್, ಈತನಿಗೆ ಒಬ್ಬ ಯುವತಿ ಮೇಲೆ ಪ್ರೇಮಾಂಕುರವಾಗುತ್ತೆ. ಅದು ಸಹ ಆಕೆ ಬದುಕಿದ್ದಾಗ ಅಲ್ಲ, ಆಕೆ ಸತ್ತು ಹೆಣವಾದ ಮೇಲೆ, ಅದಕ್ಕೆ ಆತ, ಮಣ್ಣು ಮಾಡಿದ್ದ ಆಕೆಯ ದೇಹವನ್ನೇ ಕದ್ದಿದ್ದ. ನಂತರ ಆಕೆಯನ್ನ ಬದುಕಿಸೋದಕ್ಕೆ ಆ ನಿರ್ಜೀವ ದೇಹದ ಮೇಲೆ ಚಿತ್ರ ವಿಚಿತ್ರ ಪ್ರಯೋಗ ಮಾಡಿದ್ದಾನೆ. ಆದರೆ ಆತ ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾಗಿದ್ದವು.
ಕೊನೆಗೆ ಆ ಶವ ಕೊಳೆಯದಂತೆ ಸಂಗ್ರಹಿಸಿ ಇಡುತ್ತಾನೆ. ಕಣ್ಣುಗಳನ್ನ ಗಾಜಿನಿಂದ ಹಾಗೂ ಮುಖವನ್ನ ಮಾಸ್ಕ್ ಹಾಕಿ ಕೊಳೆಯದಂತೆ ನೋಡುತ್ತಾನೆ. ಹೀಗೆ ಆತ ಬರೋಬ್ಬರಿ 7 ವರ್ಷ ಮಾಡಿದ್ದ. ಕೊನೆಗೆ ಸತ್ತ ಮಹಿಳೆಯ ಕುಟುಂಬದವರಿಗೆ ಅನುಮಾನ ಬಂದು ಪೊಲೀಸರಿಗೆ ದೂರು ಕೊಡುತ್ತಾರೆ. ಪೊಲೀಸರು ಬಂದು ತನಿಖೆ ನಡೆಸಿದಾಗ ದಂಗಾಗಿ ಹೋಗಿದ್ದರು. ಆಗ ಆತ ಆ ಮಹಿಳೆಯ ಹೆಣವನ್ನು ತನ್ನ ವಧು ಎಂದು ಪರಿಚಯ ಮಾಡಿಸಿದ್ದ.
ಸತ್ತ ಮಹಿಳೆಯ ಹೆಸರು ಮರಿಯಾ ಎಲ್ಲಾ ಮಿಲಾಗೋ ಡಿ ಹೊಯೊಸ್ ಎಂದಾಗಿತ್ತು. 21 ವರ್ಷದ ಆಕೆ ಚಿಕಿತ್ಸೆಗೆಂದು ಕೀ ವೆಸ್ಟ್ ಫ್ಲೋರಿಡಾದ ಆಸ್ಪತ್ರೆಗೆ ಬಂದಿದ್ದಾಗ, ಡಾ. ಟಾಂಜರ್‌ಗೆ ಆಕೆಯನ್ನ ನೋಡಿದ ಮೊದಲ ನೋಟದಲ್ಲೇಪ್ರೇಮವಾಗಿತ್ತು. ಆದರೆ ಕೆಲ ದಿನಗಳ ನಂತರ ಆಕೆ ಸಾವನ್ನಪ್ಪಿದ್ದಳು. ಆದರೆ ಡಾಕ್ಟರ್‌ಗೆ ಮಾತ್ರ ಆಕೆ ಬಗ್ಗೆ ಇದ್ದ ಪ್ರೀತಿ ಕಡಿಮೆ ಆಗಿರಲಿಲ್ಲ. ಕೆಲ ಮಾಹಿತಿ ಪ್ರಕಾರ ಆ ಜೀವವಿಲ್ಲದ ದೇಹದ ಜೊತೆ ದೈಹಿಕ ಸಂಬಂಧವನ್ನು ಸಹ ಬೆಳೆಸಿ 7 ವಷ೯ಗಳ ಕಾಲ ಕಳೆದಿದ್ದ.
ಆಕೆಯ ಬದುಕಿಸುವ ಪ್ರಯತ್ನದಲ್ಲಿ ಸೋತು ಹೋಗಿದ್ದ ಡಾಕ್ಟರ್‌ನನ್ನ ಪೊಲೀಸರು ಬಂಧಿಸಿದ್ದರು. ಆದರೂ ಇದನ್ನು ಅಪರಾಧ ಎಂದು ಪರಿಗಣಿಸಿ ಕಠಿಣ ಶಿಕ್ಷೆ ಕೊಡುವಲ್ಲಿ ಪೊಲೀಸರು ಅಸಫಲರಾದರು ಕಾರಣ ಕಾನೂನಿನಲ್ಲಿರುವ ಲೋಪದೋಷಗಳು.