ಸಾಮಾನ್ಯವಾಗಿ ಮನೆಯೊಂದರಲ್ಲಿ 102 ವರ್ಷಗಳಿಂದ ಜನರು ವಾಸಿಸುತ್ತಿದ್ದಾರೆ ಎಂದು ಕೇಳಿದೊಡನೆಯೇ ನಾವು ಅಲ್ಲಿ ಕನಿಷ್ಠ ಮೂರು ತಲೆಮಾರುಗಳು ಜೀವಿಸಿವೆ ಎಂದು ಭಾವಿಸುವುದು ಸಾಮಾನ್ಯ.
ಆದರೆ ಬ್ರಿಟನ್‌ನ ಈ ಮನೆಯೊಂದರಲ್ಲಿ ವಾಸಿಸುತ್ತಿರುವ 104 ವರ್ಷದ ಹಿರಿಯಜ್ಜಿಯೊಬ್ಬರು ಮೂರು ತಲೆಮಾರುಗಳ ಜನರೊಂದಿಗೆ ಅಲ್ಲೇ ವಾಸಿಸುತ್ತಾ ಬಂದಿದ್ದಾರೆ. ಮೊದಲ ವಿಶ್ವ ಮಹಾಯುದ್ಧದ ಸಂದರ್ಭದಲ್ಲಿ ಜನಿಸಿದ ನ್ಯಾನ್ಸಿ ಜೋನ್ ಗಿಫ್ಫರ್ಡ್ ಮೂರು ಬೆಡ್‌ರೂಂನ ಈ ಮನೆಯಲ್ಲಿ ಬಹುತೇಕ ತಮ್ಮ ಇಡೀ ಜೀವಿತವನ್ನು ಜೀವಿಸಿದ್ದಾರೆ.
ಆರೋಗ್ಯ ಸಂಬಂಧಿ ಅಗತ್ಯತೆಗಳ ಕಾರಣ ಈ ಮನೆಯನ್ನು ಮಾರಾಟಕ್ಕಿದ್ದಾರೆ ಈ ಅಜ್ಜಿ. ಗ್ಲಾಸ್ಟನ್‌ಬರಿಯಲ್ಲಿರುವ ನರ್ಸಿಂಗ್ ಹೋಂ ಒಂದಕ್ಕೆ ಸೇರಲು ಸಜ್ಜಾಗಿರುವ ನ್ಯಾನ್ಸಿ, £1,69,950ಗೆ (1.7 ಕೋಟಿ ರೂ.) ಅಜ್ಜಿಯ ಈ ಮನೆಯನ್ನು 1921ರಲ್ಲಿ £200ಗೆ ಖರೀದಿ ಮಾಡಲಾಗಿತ್ತು ಎಂದು ಸೊಮರ್ಸೆಟ್ ಕೌಂಟಿ ಗ್ಯಾಜ಼ೆಟ್ ವರದಿ ಮಾಡಿದೆ.
ತಮ್ಮ ಮನೆಗೆ ಬಂದ ವೇಳೆ ನ್ಯಾನ್ಸಿಗೆ ಆಗ ಕೇವಲ ಎರಡು ವರ್ಷ ವಯಸ್ಸು. 1882ರಲ್ಲಿ ಕಟ್ಟಲಾದ ಈ ಮನೆಗೆ ಕಾಲಕಾಲಿಕವಾಗಿ ಮಾರ್ಪಾಡುಗಳನ್ನು ಮಾಡುತ್ತಾ, ಹೆಚ್ಚುವರಿ ಗೋಡೆಗಳನ್ನು ಹಾಕಿ, ಅಡುಗೆ ಮನೆಯನ್ನು ಆಧುನೀಕರಣಗೊಳಿಸಲಾಗಿದೆ.