ರೆಸ್ಟೋರೆಂಟ್ ನಲ್ಲಿ ಬಿಟ್ಟಿಯಾಗಿ ಖಾದ್ಯ ಸವಿಯಬೇಕು ಅಂತಾ ಎಂದಾದರೂ ಯೋಚಿಸಿದ್ದೀರಾ..? ಹಾಗಿದ್ದರೆ ಈ ರೆಸ್ಟೋರೆಂಟ್ ಗೆ ಭೇಟಿ ನೀಡಿ. ಫ್ರೀ ಖಾದ್ಯದ ಜೊತೆಗೆ ನಿಮಗೆ ಹಣ ಕೂಡ ಸಿಗುತ್ತದೆ. ಇವರೇನು ಬೊಗಳೆ ಬಿಡುತ್ತಾರೆ ಅನ್ಕೋಬೇಡಿ.. ಈ ಸ್ಟೋರಿ ಓದಿ ನಿಮಗೆ ಗೊತ್ತಾಗುತ್ತೆ..!
ಏಳು ವರ್ಷದ ಹಿಂದೆ ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ಮಹಿಳೆ ಸಿಕ್ಕಿದ್ದೆಲ್ಲಿ ಗೊತ್ತಾ….?
ಯುಕೆಯಲ್ಲಿರುವ ರೆಸ್ಟೋರೆಂಟ್ ಒಂದು ರೋಸ್ಟ್ ಮಾಡಿದ ಆಲೂಗಡ್ಡೆಯನ್ನು ಸವಿಯುವ ಅತ್ಯಾಕರ್ಷಕ ಉದ್ಯೋಗ ಅವಕಾಶವನ್ನು ಒದಗಿಸುತ್ತಿದೆ. ಈ ಆಹಾರ ಸವಿದರೆ ನಿಮಗೆ 500 ಪೌಂಡ್ ಅಂದ್ರೆ ಸುಮಾರು 50,000 ರೂ. ನಗದು ನೀಡಲಾಗುತ್ತದೆ.
ಹೌದು, ರೆಸ್ಟೋರೆಂಟ್ ವೊಂದು ತನ್ನ ಹೊಸ ಖಾದ್ಯವನ್ನು ಪರಿಚಯಿಸುತ್ತಿದೆ. ಅದರ ಗುಣಮಟ್ಟ ಅತ್ಯುತ್ತಮವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಈ ಆಫರ್ ನೀಡಲಾಗುತ್ತಿದೆ.
https://www.instagram.com/p/CTb_3K9jlgi/?utm_source=ig_web_copy_link