ನಾವೆಲ್ಲರೂ ವಿಲಕ್ಷಣ ಮತ್ತು ಅಸಾಮಾನ್ಯವಾಗಿ ತೋರುವ ಉದ್ಯೋಗ ಜಾಹೀರಾತುಗಳನ್ನು ನೋಡಿದ್ದೇವೆ, ಆದರೆ ಈ ಒಂದು ಖಾಲಿ ಹುದ್ದೆಯು ಮಾತ್ರ ನಿಮ್ಮ ತಲೆ ತಿರುಗಿಸುತ್ತದೆ. ಮಲದ ವಾಸನೆಯನ್ನು ನೋಡುವ ಉದ್ಯೋಗವಿದು. ನಿಜ….! ನೀವು ಸರಿಯಾಗಿ ಕೇಳಿದ್ದೀರಿ!
ಕಂಪೆನಿಯೊಂದು ಜನರ ಮಲದ ವಾಸನೆಯನ್ನು ಕಂಡುಹಿಡಿಯುವ ಉದ್ಯೋಗಕ್ಕೆ ಆಫರ್ ಮಾಡಿದೆ. ಮಲದ ವಾಸನೆಯಿಂದಲೇ ಹಲವಾರು ರೋಗಗಳನ್ನು ಕಂಡುಹಿಡಿಯಲು ಸಾಧ್ಯ. ಆದ್ದರಿಂದ ಇದನ್ನು ಪರೀಕ್ಷಿಸಲು ಉದ್ಯೋಗಿಗಳಿಗೆ ಆಹ್ವಾನ ಮಾಡಿದೆ.
ಕರುಳಿನ ಆರೋಗ್ಯ ಸಲಹಾ ಸೇವೆಗಳನ್ನು ಒದಗಿಸುವ ಫೀಲ್ ಕಂಪ್ಲೀಟ್ ಎಂಬ ಇಂಗ್ಲೆಂಡ್ ಮೂಲದ ನ್ಯೂಟ್ರಿಷನ್ ಸಂಸ್ಥೆಯು ಈ ಉದ್ಯೋಗಕ್ಕೆ ಆಫರ್ ಮಾಡಿದೆ ಇದಕ್ಕೆ ಸಂಬಳವನ್ನು ಬಹುಶಃ ನೀವು ಊಹಿಸಿರಲಿಕ್ಕೂ ಸಾಧ್ಯವಿಲ್ಲ. £ 1,500 (ಅಂದರೆ ಸುಮಾರು ಒಂದೂವರೆ ಲಕ್ಷ ರೂ!) ಆಫರ್ ನೀಡಿದೆ. ಈ ಬಗ್ಗೆ ಆಸಕ್ತಿ ಇರುವವರು ಅರ್ಜಿ ಸಲ್ಲಿಸಿ ಎಂದು ಹೇಳಿದೆ.