ರಮ್ಜಾನ್ ಹಬ್ಬದ ಸಂಭ್ರಮದಲ್ಲಿರುವ ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ, ಮಸೀದಿ ರಸ್ತೆಯ ಬೀದಿಗಳಲ್ಲಿ ಬಗೆಬಗೆಯ ತಿಂಡಿಗಳು ಸಿಗುತ್ತಿದ್ದು ತಿಂಡಿ ಪ್ರಿಯರಿಗೆ ವಿಶೇಷ ಖಾದ್ಯಗಳನ್ನು ಉಣಬಡಿಸುತ್ತಿದೆ.
ಕಬಾಬ್‌ಗಳಿಂದ ಹಿಡಿದು ಥರಾವರಿ ಬಿರಿಯಾನಿಗಳವರೆಗೂ ವಿಶೇಷ ಖಾದ್ಯಗಳನ್ನು ಪ್ರಯತ್ನಿಸಿ ನೋಡಲು ತಿಳಿಸಿರುವ ಟ್ವಿಟ್ಟಿಗರೊಬ್ಬರು, ಅಲ್ಲಿ ಸಿಗುವ ಭಕ್ಷ್ಯಗಳ ಮಿನಿ ಗೈಡ್ ಒಂದನ್ನು ಹಂಚಿಕೊಂಡಿದ್ದಾರೆ.
“ಬೆಂಗಳೂರಿನ ಜನಪ್ರಿಯ ಮಸೀದಿ ರಸ್ತೆಯಲ್ಲಿ ರಮ್ಜಾನ್ ಫುಡ್ ಸ್ಟ್ರೀಟ್ ಉತ್ಸವದ ವೇಳೆ ಏನೆಲ್ಲಾ ತಿನ್ನಬೇಕೆಂದು ಮಿನಿ ಗೈಡ್ ಒಂದು ಇಲ್ಲಿದೆ. ಪಥ್ಥರ್ ಕಾ ಘೋಶ್ತ್. ಬಹುಶಃ ನೀವು ಮಾರುಕಟ್ಟೆಗಳಲ್ಲಿ ನೋಡುವ ಅತ್ಯಂತ ಸಾಮಾನ್ಯ ತಿನಿಸು. ಬಹುಶಃ ಹೊಟ್ಟೆಗಿಂತ ಕಣ್ಣುಗಳಿಗೆ ಹೆಚ್ಚು ಹಿತವಾಗಿ ಕಾಣುತ್ತವೆ,” ಎಂದು ಹೇಳಿಕೊಂಡಿರುವ ಇವರು, ಬೀದಿಯ ಒಂದೆರಡು ವಿಡಿಯೋಗಳನ್ನು ಶೇರ್ ಮಾಡಿದ್ದಾರೆ.
ಪಥ್ಥರ್ ಕಾ ಘೋಶ್ತ್, ಸೀಕ್ ಕೆಬಾಬ್, ಮಟನ್ ಹಲೀಂ, ನಾನ್-ವೆಜ್ ಪರಾಠಾಗಳು ಹಾಗೂ ಒಂದಷ್ಟು ಬಗೆಯ ಸಿಹಿ ತಿನಿಸುಗಳನ್ನು ಸವಿಯಲು ಸಲಹೆ ನೀಡಿದ್ದಾರೆ ಈ ನೆಟ್ಟಿಗ.