
ಪ್ರಮುಖ ಸಾಮಾಜಿಕ ಮಾಧ್ಯಮಗಳಲ್ಲೊಂದಾದ ಟ್ವಿಟ್ಟರ್, ತನ್ನ ಅತಿ ಹೆಚ್ಚು ಇಷ್ಟಪಟ್ಟ ಟ್ವೀಟ್‌ಗಳ ಪಟ್ಟಿಯನ್ನು ಬಹಿರಂಗಪಡಿಸಿದೆ. ಸರ್ಕಾರ, ಕ್ರೀಡೆ, ಮನರಂಜನೆ ಇತ್ಯಾದಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಹೆಚ್ಚು-ರೀಟ್ವೀಟ್ ಮಾಡಲಾದ ಮತ್ತು ಅಗ್ರ ಟ್ವೀಟ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಭಾರತದಲ್ಲಿ, ಕ್ರಿಕೆಟಿಗ ವಿರಾಟ್ ಕೊಹ್ಲಿ ತಂದೆಯಾದ ಬಗ್ಗೆ ಜನರು ಬಹಳ ಕುತೂಹಲ ತೋರಿದ್ದರು ಎಂದು ಕಾಣುತ್ತದೆ. ಯಾಕೆಂದರೆ ತಮ್ಮ ಮಗಳು ವಮಿಕಾ ಆಗಮನವನ್ನು ಘೋಷಿಸಿದ ಕೊಹ್ಲಿಯ ಟ್ವೀಟ್ ಅನ್ನು ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಇದು 5.3 ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಮತ್ತು 50.4K ರೀಟ್ವೀಟ್‌ಗಳನ್ನು ಸ್ವೀಕರಿಸಿದೆ.
ಜನವರಿ 11, 2021 ರಂದು ಮಾಡಿದ ಟ್ವೀಟ್‌ನಲ್ಲಿ, ವಿರಾಟ್ ತಂದೆಯಾಗಿರುವುದಾಗಿ ಘೋಷಿಸಿದ್ದರು. ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ಅವರೊಂದಿಗೆ ಮಗಳನ್ನು ಸ್ವಾಗತಿಸಿದ್ದರು. ಪ್ರೀತಿ, ಪ್ರಾರ್ಥನೆ ಮತ್ತು ಶುಭ ಹಾರೈಕೆಗಳಿಗಾಗಿ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ಕೊಹ್ಲಿ ಕೃತಜ್ಞತೆ ಸಲ್ಲಿಸಿದ್ದರು.
ಕಳೆದ ವರ್ಷವೂ ಸಹ, ಅನುಷ್ಕಾ ಶರ್ಮಾ ಅವರ ಗರ್ಭಧಾರಣೆಯನ್ನು ಘೋಷಿಸಿದ್ದ ವಿರಾಟ್ ಕೊಹ್ಲಿ ಅವರ ಟ್ವೀಟ್, 2020ರಲ್ಲಿ ಹೆಚ್ಚು ಲೈಕ್ಸ್ ಗಿಟ್ಟಿಸಿತ್ತು.
ವಿರಾಟ್ ಅವರ ಮತ್ತೊಂದು ಟ್ವೀಟ್ ಕ್ರೀಡಾ ವಿಭಾಗದಲ್ಲಿ ಮಾಡಿರುವ ಟ್ವೀಟ್, ವರ್ಷದಲ್ಲಿ ಹೆಚ್ಚು ಇಷ್ಟಪಟ್ಟ ಮತ್ತು ಹೆಚ್ಚು ಮರುಟ್ವೀಟ್ ಆಗಿದೆ. ಟ್ವೀಟ್‌ನಲ್ಲಿ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಂದ್ಯ ಗೆದ್ದಿದ್ದಕ್ಕಾಗಿ ಎಂ.ಎಸ್. ಧೋನಿ ಅವರನ್ನು ಕೊಹ್ಲಿ ಶ್ಲಾಘಿಸಿದ್ದರು. 91,600 ರಿಟ್ವೀಟ್‌ಗಳು ಮತ್ತು 529,500 ಲೈಕ್‌ಗಳೊಂದಿಗೆ ಈ ವರ್ಷ ಕ್ರೀಡೆಯಲ್ಲಿ ಹೆಚ್ಚು ಮರುಟ್ವೀಟ್ ಮಾಡಲಾದ ಮತ್ತು ಲೈಕ್ಸ್ ಗಿಟ್ಟಿಸಿಕೊಂಡ ಟ್ವೀಟ್ ಆಗಿದೆ.