alex Certify ಬಾಯಿಯ ಕ್ಯಾನ್ಸರ್ ಅನ್ನು ಕ್ಷಣಮಾತ್ರದಲ್ಲಿ ಪತ್ತೆ ಮಾಡಬಲ್ಲದು ಈ ಟೂತ್ ಬ್ರಷ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಯಿಯ ಕ್ಯಾನ್ಸರ್ ಅನ್ನು ಕ್ಷಣಮಾತ್ರದಲ್ಲಿ ಪತ್ತೆ ಮಾಡಬಲ್ಲದು ಈ ಟೂತ್ ಬ್ರಷ್….!

ಕ್ಯಾನ್ಸರ್ ಒಂದು ಮಾರಣಾಂತಿಕ ಕಾಯಿಲೆ. ಇದು ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರು ಮತ್ತು ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 2020ರಲ್ಲಿ ಬಾಯಿಯ ಕ್ಯಾನ್ಸರ್‌ನಿಂದ ಸುಮಾರು 1,77,757 ಸಾವುಗಳು ಸಂಭವಿಸಿವೆ. ಮುಖ್ಯವಾಗಿ ತಂಬಾಕು ಸೇವನೆ ಮತ್ತು ಕಳಪೆ ಮೌಖಿಕ ನೈರ್ಮಲ್ಯದಿಂದ ಬಾಯಿಯ ಕ್ಯಾನ್ಸರ್‌ ಉಂಟಾಗುತ್ತದೆ.

ಬಾಯಿಯ ಕ್ಯಾನ್ಸರ್‌ನ ಲಕ್ಷಣಗಳನ್ನು ಆರಂಭಿಕ ಹಂತದಲ್ಲಿ ಗುರುತಿಸುವುದು ಬಹಳ ಕಷ್ಟ. ಅನೇಕ ಬಾರಿ ಜನರು ಅದನ್ನು ನಿರ್ಲಕ್ಷಿಸಿಬಿಡುತ್ತಾರೆ. ಹಾಗಾಗಿ ಐಐಟಿ ಕಾನ್ಪುರದ ವಿಜ್ಞಾನಿ ಮತ್ತು ಜೆಕೆ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನ ವೈದ್ಯರೊಬ್ಬರು ಬಾಯಿಯ ಕ್ಯಾನ್ಸರ್‌ ಪತ್ತೆಗೆ ಟೂತ್ ಬ್ರಷ್‌ ಒಂದನ್ನು ಆವಿಷ್ಕರಿಸಿದ್ದಾರೆ. ಈ ಸಾಧನವು ಬಾಯಿಯ ಕ್ಯಾನ್ಸರ್ ಅನ್ನು ಮೊದಲ ಹಂತದಲ್ಲಿಯೇ ಪತ್ತೆಹಚ್ಚುವ ಸಾಮರ್ಥ್ಯವನ್ನು ಹೊಂದಿದೆ

ಕೆಲವೇ ಸೆಕೆಂಡುಗಳಲ್ಲಿ ಕ್ಯಾನ್ಸರ್ ಪತ್ತೆ!

ಹಿರಿಯ ವಿಜ್ಞಾನಿ ಪ್ರೊಫೆಸರ್‌ ಜಯಂತ್ ಕುಮಾರ್ ಸಿಂಗ್ ಮತ್ತು ಅವರ ತಂಡ ಈ ಸಾಧನವನ್ನು ಅಭಿವೃದ್ಧಿಪಡಿಸಿದೆ. ಸಂಸ್ಥೆಯು ಈ ಸಾಧನಕ್ಕೆ ‘ಮುಖ ಪರೀಕ್ಷಕ’ ಎಂದು ಹೆಸರಿಸಿದೆ. ಇದುವರೆಗೆ ಬಾಯಿಯ ಕ್ಯಾನ್ಸರ್ ಪತ್ತೆ ಮಾಡಲು ಅಂಗಾಂಶ ಪರೀಕ್ಷೆ ಮಾಡಲಾಗುತ್ತಿತ್ತು. ಇದು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಆದರೆ ಈ ಸಾಧನದೊಂದಿಗೆ ಪರೀಕ್ಷೆಗೆ ಅಂಗಾಂಶವನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ ಮತ್ತು ಪರೀಕ್ಷಾ ವರದಿ ಕೆಲವೇ ಸೆಕೆಂಡುಗಳಲ್ಲಿ ಲಭ್ಯವಾಗುತ್ತದೆ.

ಕ್ಯಾನ್ಸರ್ ಪತ್ತೆ ಮಾಡಲು ಈ ಸಾಧನವನ್ನು ಬಾಯಿಯೊಳಗೆ ಹಾಕಿ ತಿರುಗಿಸಬೇಕಾಗುತ್ತದೆ. ಇದರಲ್ಲಿ ಅಳವಡಿಸಲಾಗಿರುವ ಕ್ಯಾಮೆರಾಗಳು ಮತ್ತು ಸೆನ್ಸರ್‌ಗಳು ಬಾಯಿಯೊಳಗಿನ ಚಿತ್ರವನ್ನು ಸಂಸ್ಥೆ ಅಭಿವೃದ್ಧಿಪಡಿಸಿದ ಆ್ಯಪ್‌ಗೆ ಕಳುಹಿಸುತ್ತವೆ. ಇದರ ಆಧಾರದ ಮೇಲೆ ರೋಗಿಗೆ ಕ್ಯಾನ್ಸರ್ ಇದೆಯೇ ಅಥವಾ ಇಲ್ಲವೇ ಎಂಬುದು ತಿಳಿಯುತ್ತದೆ.

ಈ ಡಿವೈಸ್‌ನಲ್ಲಿ AI ಸಂವೇದಕವನ್ನು ಬಳಸಲಾಗಿದೆ. ಇದು ಬಾಯಿಯ ಪ್ರತಿಯೊಂದು ಭಾಗವನ್ನು ನಿಕಟವಾಗಿ ಪರಿಶೀಲಿಸುತ್ತದೆ. ಮೊದಲ ಹಂತದಲ್ಲಿಯೇ ಕ್ಯಾನ್ಸರ್ ಕೋಶಗಳನ್ನು ಕಂಡುಹಿಡಿಯುತ್ತದೆ. ಇದು ಸುಲಭವಾಗಿ ಬಳಸಬಹುದಾದ ಪೋರ್ಟಬಲ್

ಡಿವೈಸ್.‌ ಸ್ವಯಂ ಪವರ್‌ ಬ್ಯಾಕಪ್‌ ಇದರಲ್ಲಿದೆ. ರಾಸಾಯನಿಕ ಮುಕ್ತವಾಗಿರೋ ಈ ಸಾಧನದಲ್ಲಿ ಡೇಟಾ ಸಂಗ್ರಹಣೆಗೂ ಅವಕಾಶವಿದೆ. ದೇಶದ ಇತರ ಹಲವು ಆಸ್ಪತ್ರೆಗಳಲ್ಲೂ ಪ್ರಯೋಗ ಯಶಸ್ವಿಯಾಗಿದ್ದು, ಶೀಘ್ರದಲ್ಲೇ ಇದು ಮಾರುಕಟ್ಟೆಗೆ ಬರಲಿದೆ. ಬೆಲೆ 1 ಲಕ್ಷಕ್ಕಿಂತ ಕಡಿಮೆ ಇರಲಿದೆ ಎಂದು ಹೇಳಲಾಗುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...