ಇ ಕಾಮರ್ಸ್ ದೈತ್ಯ ಅಮೆಜಾನ್ ವಿರುದ್ಧ ಟ್ರೇಡ್ ಮಾರ್ಕ್ ಸಮರ ನಡೆಸಿದ್ದ ಬೆಂಗಳೂರಿನ ಬೇಕರಿಯೊಂದು ಅದರಲ್ಲಿ ಈಗ ಜಯ ಸಾಧಿಸಿದೆ. ಬೆಂಗಳೂರಿನ ‘ಹ್ಯಾಪಿ ಬೆಲ್ಲಿ ಬೇಕ್ಸ್ ‘ಕಾನೂನು ಹೋರಾಟ ನಡೆಸಿದ್ದ ಬೇಕರಿ.
2008ರಲ್ಲಿ ಆರಂಭವಾದ ಈ ಬೇಕರಿ 2016ರಲ್ಲಿ ಹ್ಯಾಪಿ ಬೆಲ್ಲಿ ಎಂಬ ಟ್ರೇಡ್ ಮಾರ್ಕ್ ಅನ್ನು ಪಡೆದುಕೊಂಡಿತ್ತು. ಆದರೆ, ಅಮೆಜಾನ್ ಇದೆ ಬ್ರಾಂಡ್ ಹೆಸರಿನಲ್ಲಿ ಬೇಕರಿ ತಿನಿಸು ಹಾಗೂ ಡೈರಿ ಉತ್ಪನ್ನ ಮಾರಾಟ ಆರಂಭಿಸಿತ್ತು.
ಹೀಗಾಗಿ ಹ್ಯಾಪಿ ಬೆಲ್ಲಿ ಬೇಕ್ಸ್, ಅಮೆಜಾನ್ ತನ್ನ ಟ್ರೇಡ್ ಮಾರ್ಕ್ ಬಳಸುತ್ತಿರುವ ಹಿನ್ನೆಲೆಯಲ್ಲಿ ಅದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿತ್ತು. ನಾಲ್ಕು ವರ್ಷಗಳ ಕಾಲ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಇದರ ವಿಚಾರಣೆ ನಡೆದಿದ್ದು, ಇದೀಗ ಹ್ಯಾಪಿ ಬೆಲ್ಲಿ ಬೇಕ್ಸ್ ಪರ ತೀರ್ಪು ಹೊರಬಿದ್ದಿದೆ.