ವಿಟಮಿನ್ ಎ ಸಮೃದ್ಧವಾಗಿರುವ ಕ್ಯಾರೆಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಚಳಿಗಾಲದಲ್ಲಿ ಇದು ಬೆಸ್ಟ್. ಮಕ್ಕಳು ಕಚ್ಚಾ ಕ್ಯಾರೆಟ್ ಇಷ್ಟಪಡುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಕ್ಯಾರೆಟ್ ಕೇಕ್ ಮಾಡಿಕೊಡಬಹುದು.
ಕ್ಯಾರೆಟ್ ಕೇಕ್ ಮಾಡಲು ಬೇಕಾಗುವ ಪದಾರ್ಥ :
ಕ್ಯಾರೆಟ್ – ½ ಕೆಜಿ
ಸಕ್ಕರೆ – 250 ಗ್ರಾಂ
ಕೋವಾ- 100 ಗ್ರಾಂ
ತುಪ್ಪ – 50 ಗ್ರಾಂ
ಹಾಲಿನಪುಡಿ : 50 ಗ್ರಾಂ
ತೆಂಗಿನಕಾಯಿ ಪೇಸ್ಟ್- 100 ಗ್ರಾಂ
ಏಲಕ್ಕಿ ಪುಡಿ – 1 ಚಮಚ
ಒಣ ಹಣ್ಣುಗಳು – 100 ಗ್ರಾಂ
ಕ್ಯಾರೆಟ್ ಕೇಕ್ ಮಾಡುವ ವಿಧಾನ :
ಮೊದಲು ಒಂದು ಬಾಣೆಲೆಗೆ ತುಪ್ಪ ಹಾಕಿ, ಒಣ ಹಣ್ಣುಗಳನ್ನು ಹಾಕಿ ಹುರಿದುಕೊಳ್ಳಿ. ನಂತ್ರ ಅದೇ ಪಾತ್ರೆಗೆ ತುರಿದ ಕ್ಯಾರೆಟ್ ಹಾಕಿ ನೀರು ಆರುವವರೆಗೆ ಬಾಡಿಸಿ. ನಂತ್ರ ಅದಕ್ಕೆ ಸಕ್ಕರೆ, ಕೋವಾ, ಹಾಲಿನ ಪುಡಿ ಹಾಗೂ ಏಲಕ್ಕಿ ಪುಡಿ, ಒಣ ಹಣ್ಣುಗಳನ್ನು ಹಾಕಿ. ಸರಿಯಾಗಿ ಮಿಕ್ಸ್ ಆದಮೇಲೆ ಗ್ಯಾಸ್ ಬಂದ್ ಮಾಡಿ.
ಕೇಕ್ ಅಚ್ಚಿಗೆ ತುಪ್ಪವನ್ನು ಹಾಕಿ ಕ್ಯಾರೆಟ್ ಮಿಶ್ರಣವನ್ನು ಹಾಕಿ. ಅದ್ರ ಮೇಲೆ ತೆಂಗಿನಕಾಯಿ ಪೇಸ್ಟ್ ಹಾಕಿ. ಇದನ್ನು 10 ನಿಮಿಷ ಫ್ರಿಜ್ ನಲ್ಲಿಡಿ. ನಂತ್ರ ಒಂದು ಪ್ಲೇಟ್ ಮೇಲೆ ಕೇಕ್ ಅಚ್ಚನ್ನು ಉಲ್ಟಾ ಮಾಡಿದ್ರೆ ಕೇಕ್ ಸರಿಯಾಗಿ ಬಿಡುತ್ತದೆ. ಇದನ್ನು ಬೇಕಾದ ಆಕಾರಕ್ಕೆ ಕತ್ತರಿಸಿ.