ಪ್ರತಿಭೆಗಳನ್ನು ಉಳಿಸಿಕೊಳ್ಳುವ ಯತ್ನದಲ್ಲಿ ಆಪಲ್ ಇಂಕ್ ತನ್ನ ಕೆಲ ಇಂಜಿನಿಯರ್‌ಗಳಿಗೆ ಸ್ಟಾಕ್ ಬೋನಸ್‌ಗಳನ್ನು ಘೋಷಿಸಿದೆ.
ವಿಶಿಷ್ಟವಾದ ಬೋಸನ್ ಘೋಷಣೆ ಮೂಲಕ ತನ್ನಲ್ಲಿರುವ ಕೌಶಲ್ಯವಂತ ಮಂದಿ ಮೆಟಾ ಪ್ಲಾಟ್‌ಫಾರಂಗಳಂಥ ತನ್ನ ಎದುರಾಳಿಗಳ ಬಳಿ ಸೇರದಂತೆ ನೋಡಿಕೊಳ್ಳಲು ಆಪಲ್ ಚಿಂತಿಸುತ್ತಿದೆ.
ಸಿಲಿಕಾನ್ ವಿನ್ಯಾಸ, ಹಾರ್ಡ್‌ವೇರ್ ಮತ್ತು ತಂತ್ರಾಂಶದ ಆಯ್ದ ಭಾಗಗಳ ಮೇಲೆ ಕೆಲಸ ಮಾಡುವವರು ಮತ್ತು ಕಾರ್ಯಾಚರಣಾ ಸಮೂಹದ ಇಂಜಿನಿಯರ್‌ಗಳಿಗೆ ನಿರ್ಬಂಧಿಕ ಸ್ಟಾಕ್ ಘಟಕಗಳ ಬೋನಸ್‌ಗಳನ್ನು ಕಳೆದ ವಾರ ಕಂಪನಿ ಘೋಷಿಸುವ ಮೂಲಕ, ಸಾಮಾನ್ಯವಾದ ವೇಳಾಪಟ್ಟಿಯನ್ನು ಮೀರಿ ಈ ಪುರಸ್ಕಾರಗಳನ್ನು ಘೋಷಿಸಿದೆ.
ನೆಚ್ಚಿನ ನಟನ ನೋಡಲು ಮುಗಿಬಿದ್ದ ಫ್ಯಾನ್ಸ್: ಜನನಿಬಿಡ ಪ್ರದೇಶದಲ್ಲಿ ಐಷಾರಾಮಿ ಕಾರ್ ಬಿಟ್ಟು ಸಲ್ಮಾನ್ ಖಾನ್ ಆಟೋ ಚಾಲನೆ
ಈ ಶೇರುಗಳು ನಾಲ್ಕು ವರ್ಷಕ್ಕಿಂತ ಹೆಚ್ಚಿನ ಅವಧಿಯವಾಗಿದ್ದು, ಐಫೋನ್ ತಯಾರಕ ಸಂಸ್ಥೆಯಲ್ಲಿ ಉಳಿದುಕೊಳ್ಳಲು ಪ್ರೇರಣೆ ನೀಡುವ ಉದ್ದೇಶದಿಂದ ನೌಕರರಿಗೆ ಹೀಗೆ ಮಾಡಲಾಗಿದೆ.
ಕೆಲವೊಂದು ಪ್ರಕರಣಗಳಲ್ಲಿ $50,000 ದಿಂದ $180,000 (1.35 ಕೋಟಿ ರೂ) ವರೆಗೂ ಬೋನಸ್‌ಗಳನ್ನು ನೀಡಲಾಗಿದೆ ಎಂದು ಅನಾಮಧೇಯರಾಗಿ ಉಳಿಯಲು ಇಚ್ಛಿಸಿದ ಕೆಲವೊಂದು ನೌಕರರು ತಿಳಿಸಿದ್ದಾರೆ. ಅತ್ಯುತ್ತಮ ಸಾಧಕರಿಗೆ ಪುರಸ್ಕಾರದ ರೂಪದಲ್ಲಿ ಈ ಬೋಸನ್‌ಗಳನ್ನು ಸಂಸ್ಥೆಯ ಉನ್ನತ ಅಧಿಕಾರಿಗಳು ಘೋಷಿಸಿದ್ದಾರೆ.