alex Certify ಕಲುಷಿತ ವಾತಾವರಣದಿಂದ ಆರೋಗ್ಯ ರಕ್ಷಿಸಿಕೊಳ್ಳಲು ಬೇಕು ಈ ಚಹಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಲುಷಿತ ವಾತಾವರಣದಿಂದ ಆರೋಗ್ಯ ರಕ್ಷಿಸಿಕೊಳ್ಳಲು ಬೇಕು ಈ ಚಹಾ

ವಾಹನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಇಂತಹ ಕಲುಷಿತ ಗಾಳಿಯನ್ನು ಮನುಷ್ಯರು ಉಸಿರಾಡುವುದರಿಂದ ರೋಗ ನಿರೋಧಕ ಶಕ್ತಿ ನಾಶವಾಗಿ ಕಾಯಿಲೆಗಳು ಶುರುವಾಗುತ್ತದೆ.

ನ್ಯೂಮೋನಿಯ, ಆಸ್ತಮಾದಂತಹ ಶ್ವಾಸಕೋಶದ ಸಮಸ್ಯೆಗಳು ಕಾಡುತ್ತವೆ. ಈ ಕಲುಷಿತ ವಾತಾವರಣದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಈ ಗಿಡಮೂಲಿಕೆ ಚಹಾವನ್ನು ಸೇವಿಸಿ.

ಈ ಗಿಡಮೂಲಿಕೆ ಚಹಾ ತಯಾರಿಸಲು 1 ಇಂಚಿನ ತುರಿದ ಶುಂಠಿ, 1 ಸಣ್ಣ ದಾಲ್ಚಿನಿ ತುಂಡು, ತುಳಸಿ ಎಲೆ, 3 ಮೆಣಸಿನ ಕಾಳು, 2 ಪುಡಿ ಮಾಡದ ಏಲಕ್ಕಿ, ¼ ಚಮಚ ಸೊಂಪು ಇವಿಷ್ಟನ್ನು ತೆಗೆದುಕೊಂಡು ಒಂದು ಬಾಣಲೆಯಲ್ಲಿ ಹುರಿಯಿರಿ. ಬಳಿಕ ಈ ಎಲ್ಲಾ ಪದಾರ್ಥಗಳನ್ನು ನೀರಿನಲ್ಲಿ 10 ನಿಮಿಷಗಳ ಕಾಲ ಕುದಿಸಿ. ಬಳಿಕ ಅದನ್ನು ಸೋಸಿ ಬೆಲ್ಲ ಸೇರಿಸಿ.

ಈ ಗಿಡಮೂಲಿಕೆ ಚಹಾವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಶ್ವಾಸಕೋಶ ಸ್ವಚ್ಚವಾಗಿ ಕಾಯಿಲೆಗಳಿಂದ ಪಾರಾಗಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...