‘ವಿಶ್ವ ಆರೋಗ್ಯ ಸಂಸ್ಥೆ’ (WHO) ಪ್ರಕಾರ ಹಿಮೋಗ್ಲೋಬಿನ್ ಕೊರತೆ ಅತ್ಯಂತ ಗಂಭೀರವಾದದ್ದು. ಇದು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತದೆ. ಈ ಕಾಯಿಲೆಯಿಂದ ಬಳಲುತ್ತಿರುವವರು ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ ಅನಾಹುತವೇ ಆಗಬಹುದು.
ಆರೋಗ್ಯಕರ ದೇಹಕ್ಕೆ ಪ್ರೋಟೀನ್, ವಿಟಮಿನ್ ಮತ್ತು ಪೋಷಕಾಂಶಗಳ ಅಗತ್ಯ ಹೇರಳವಾಗಿರುತ್ತದೆ. ದೇಹದಲ್ಲಿ ರಕ್ತದ ಕೊರತೆಯಿದ್ದರೆ ಕಿರಿಕಿರಿ, ಸುಸ್ತು, ಆಯಾಸ ಮತ್ತು ದೌರ್ಬಲ್ಯ ಉಂಟಾಗುತ್ತದೆ. ದೇಹದಲ್ಲಿ ರಕ್ತದ ಕೊರತೆ ಉಂಟಾದಾಗ ಮೆದುಳು ದೇಹಕ್ಕೆ ಹಲವು ಸಂಕೇತಗಳನ್ನು ನೀಡಲು ಪ್ರಾರಂಭಿಸುತ್ತದೆ.
ದೇಹದಲ್ಲಿ ರಕ್ತಹೀನತೆಯ ಆರಂಭಿಕ ಲಕ್ಷಣಗಳು…
ದೇಹದಲ್ಲಿ ರಕ್ತದ ಕೊರತೆಯಿಂದಾಗಿ ಅನೇಕ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕಾಲು ಮತ್ತು ಕೈಗಳಲ್ಲಿ ಜುಮ್ಮೆನ್ನುವಿಕೆಯೂ ಇವುಗಳಲ್ಲೊಂದು. ರಕ್ತದೊತ್ತಡ ಕಡಿಮೆಯಾದಾಗ ಆಮ್ಲಜನಕವು ದೇಹದ ರಕ್ತನಾಳಗಳಿಗೆ ಸರಿಯಾಗಿ ತಲುಪುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಕೈ ಮತ್ತು ಕಾಲುಗಳಲ್ಲಿ ಜುಮ್ಮೆನಿಸುವಿಕೆ ಪ್ರಾರಂಭವಾಗುತ್ತದೆ. ಇದರಿಂದ ದಣಿವು ಮತ್ತು ದುರ್ಬಲತೆ ಕಾಡುತ್ತದೆ. ರಕ್ತದ ಕೊರತೆಯಿಂದಾಗಿ ಮತ್ತೆ ಮತ್ತೆ ತಲೆ ಸುತ್ತುತ್ತದೆ. ಕಣ್ಣು ಕತ್ತಲಾಗುತ್ತದೆ.
ದೇಹದಲ್ಲಿ ರಕ್ತದ ಕೊರತೆಯಿಂದ ಕೂದಲು ಉದುರಲು ಪ್ರಾರಂಭಿಸುತ್ತದೆ. ಇದ್ದಕ್ಕಿದ್ದಂತೆ ವಿಪರೀತ ಕೂದಲು ಉದುರಿದರೆ ದೇಹದಲ್ಲಿ ರಕ್ತದ ಕೊರತೆಯಿದೆ ಎಂದು ಅರ್ಥಮಾಡಿಕೊಳ್ಳಿ. ಮೊದಲು ರಕ್ತ ಪರೀಕ್ಷೆ ಮಾಡಿ. ರಕ್ತದ ಕೊರತೆಯಿಂದಾಗಿ ಬಾಯಿಯಲ್ಲಿ ಹುಣ್ಣುಗಳಾಗುತ್ತವೆ. ಮೊಡವೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.ಅಷ್ಟೇ ಅಲ್ಲ ರಕ್ತದ ಕೊರತೆಯಿಂದ ಮುಖದ ಮೇಲೆ ಅಲ್ಲಲ್ಲಿ ಹಳದಿ ಬಣ್ಣ ಕಾಣಿಸಿಕೊಳ್ಳುತ್ತದೆ.
ರಕ್ತಹೀನತೆಯಿಂದ ಪಾರಾಗಲು ಆಹಾರದಲ್ಲಿ ಫೈಬರ್, ಪ್ರೋಟೀನ್ ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳಬೇಕು. ಹಣ್ಣುಗಳನ್ನು ಸೇವಿಸಬೇಕು. ಜೊತೆಗೆ ವ್ಯಾಯಾಮ ಕೂಡ ಅನಿವಾರ್ಯ.