ಲಸಿಕೆ ಅಭಾವದ ನಡುವೆಯೂ ಈ ಸಾಧನೆ ಮಾಡಿದೆ ಮಹಾರಾಷ್ಟ್ರ..! 27-07-2021 1:13PM IST / No Comments / Posted In: Latest News, India, Live News ಕೊರೊನಾದಿಂದ ಅತೀ ಹೆಚ್ಚು ತತ್ತರಿಸಿದ್ದ ಮಹಾರಾಷ್ಟ್ರ ಇದೀಗ ಕೊರೊನಾ ವಿಚಾರದಲ್ಲಿ ಹೊಸ ಸಾಧನೆಯೊಂದನ್ನ ಮಾಡಿದೆ. ಕೊರೊನಾ 2ನೆ ಅಲೆಯ ಆರ್ಭಟ, ವೈದ್ಯಕೀಯ ಆಮ್ಲಜನಕದ ಕೊರತೆ, ಲಾಕ್ಡೌನ್ ಇವೆಲ್ಲ ಸವಾಲುಗಳ ನಡುವೆಯೂ ಮಹಾರಾಷ್ಟ್ರ 1 ಕೋಟಿಗೂ ಅಧಿಕ ಡೋಸ್ ಕೊರೊನಾ ಲಸಿಕೆಯನ್ನ ರಾಜ್ಯದ ಜನತೆಗೆ ನೀಡಿದೆ. ಮಹಾರಾಷ್ಟ್ರದಲ್ಲಿ 1,00,64,308 ಮಂದಿ ಸಂಪೂರ್ಣ ಕೊರೊನಾ ಲಸಿಕೆ ಪಡೆದಿದ್ದಾರೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಈ ವಿಚಾರವಾಗಿ ಟ್ವೀಟ್ ಮಾಡಿದ್ದು ಮಹಾರಾಷ್ಟ್ರಕ್ಕೆ ಶುಭಕೋರಿದ್ದಾರೆ. 1 ಕೋಟಿ ಮಂದಿಗೆ 2 ಡೋಸ್ ಲಸಿಕೆ ನೀಡಿದ ದೇಶದ ಮೊದಲ ರಾಜ್ಯ ಎಂಬ ಕೀರ್ತಿಗೆ ಪಾತ್ರವಾದ ಮಹಾರಾಷ್ಟ್ರಕ್ಕೆ ಅಭಿನಂದನೆಗಳು. ಲಸಿಕೆ ಅಭಾವದ ನಡುವೆಯೂ ಮಹಾರಾಷ್ಟ್ರ ಈ ಸಾಧನೆ ಮಾಡಿದೆ. ಕೇಂದ್ರವು ಕೊರೊನಾ ಲಸಿಕೆಯ ನ್ಯಾಯಯುತ ಪಾಲನ್ನು ಮಹಾರಾಷ್ಟ್ರಕ್ಕೆ ನೀಡುತ್ತಿದೆಯೇ..? ಎಂದು ಟ್ವೀಟಾಯಿಸಿದ್ದಾರೆ. Congratulations to Maharashtra for becoming the first State to administer two doses of vaccine to 1 crore persons! This despite insufficient allocation of vaccines to the State Will the centre allocate a fair share of vaccines to Maharashtra? — P. Chidambaram (@PChidambaram_IN) July 27, 2021