ಇದು ಸ್ಟಾರ್ಟಪ್ ಯುಗ. ಸಮಸ್ಯೆ, ಸವಾಲುಗಳನ್ನು ಬಂಡವಾಳ ಮಾಡಿಕೊಂಡು ಪರಿಹಾರ ರೂಪದ ಸ್ಟಾರ್ಟಪ್ಗಳು ಬರುತ್ತಿವೆ. ಈಗ ಅಂತಿಮ ಸಂಸ್ಕಾರ ಅಥವಾ ಅಂತ್ಯ ಸಂಸ್ಕಾರಕ್ಕೆ ನೆರವಾಗುವಂತಹ ಸ್ಟಾರ್ಟಪ್ ಒಂದು ಸೇವೆ ನೀಡಲು ಸಜ್ಜಾಗಿದೆ.
ಐಎಎಸ್ ಅಧಿಕಾರಿ ಅವನೀಶ್ ಶರಣ್ ಟ್ವಿಟ್ಟರ್ನಲ್ಲಿ ಈ ಸ್ಟಾರ್ಟಪ್ ಬಗೆಗಿನ ಫೋಟೋ ಹಂಚಿಕೊಂಡಿದ್ದು, ಇದು ನೆಟ್ಟಿಗರನ್ನು ಅಚ್ಚರಿಗೀಡು ಮಾಡಿದೆ.
ಇದು ದೆಹಲಿಯಲ್ಲಿ ನಡೆದ ಭಾರತ ಅಂತರರಾಷ್ಟ್ರೀಯ ವ್ಯಾಪಾರ ಮೇಳದಲ್ಲಿ ಕಾಣಿಸಿಕೊಂಡ ಸ್ಟಾರ್ಟಪ್ನ ಚಿತ್ರವಾಗಿತ್ತು. ಸುಖಂತ್ ಫ್ಯೂನರಲ್ ಎಂಜಿಎಂಟಿ ಪ್ರೈವೆಟ್ ಲಿಮಿಟೆಡ್ ಹೆಸರಿನ ಸ್ಟಾರ್ಟಪ್ ಅಂತ್ಯಕ್ರಿಯೆಯ ಸೇವೆಗಳನ್ನು ಒದಗಿಸುತ್ತಿದೆ.
ಅವನೀಶ್ ಶರಣ್ ಟ್ವಿಟರ್ನಲ್ಲಿ ಹಂಚಿಕೊಂಡ ಪೋಸ್ಟ್ ದೆಹಲಿಯ ಟ್ರೇಡ್ ಫೇರ್ನಲ್ಲಿನ ಸ್ಟಾಲ್ನ ಚಿತ್ರವನ್ನು ತೋರಿಸಿದೆ. ಚಿತ್ರವು ಅಂತ್ಯಕ್ರಿಯೆಯ ಸೇವೆಗಳನ್ನು ಒದಗಿಸುವ ಸ್ಟಾಲ್ ಅನ್ನು ಒಳಗೊಂಡಿತ್ತು.
ಸ್ಟಾರ್ಟ್ಅಪ್ನ ವೆಬ್ಸೈಟ್ನ ಪ್ರಕಾರ, “ಸುಖಾಂತ್ ಫ್ಯೂನರಲ್ ಎನ್ನುವುದು ಗೌರವಯುತ ವಿದಾಯವನ್ನು ಒದಗಿಸುವ ಉದ್ದೇಶದಿಂದ ರಚಿಸಲಾದ ಸಂಸ್ಥೆಯಾಗಿದೆ. ನಾವು ಅಂತ್ಯಕ್ರಿಯೆಯ ವಿಧಿಗಳನ್ನು ಗೌರವಯುತವಾಗಿ ಯೋಜಿಸುವಲ್ಲಿ ಪರಿಣತಿ ಹೊಂದಿರುವ ಅನುಭವಿ ವ್ಯಕ್ತಿಗಳ ಯುವ ಕಂಪನಿಯಾಗಿದೆ” ಎಂದು ಹೇಳಿಕೊಂಡಿದೆ.
ಈ ಪೋಸ್ಟ್ ನಿಸ್ಸಂಶಯವಾಗಿ ನೆಟ್ಟಿಗರ ಗಮನ ಸೆಳೆಯಿತು ಮತ್ತು ಆನ್ಲೈನ್ನಲ್ಲಿ ವೈರಲ್ ಆಯಿತು. ಹೆಚ್ಚಿನ ಪ್ರತಿಕ್ರಿಯೆ ನೀಡಲು ನೆಟ್ಟಿಗರನ್ನು ಸಹ ಪ್ರಚೋದಿಸಿದೆ.
ಸುಖಂತ್ ಫ್ಯೂನರಲ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ಸಂಜಯ್ ರಾಮಗುಡೆ ಅವರ ಪ್ರಕಾರ ಸದಸ್ಯತ್ವ ಶುಲ್ಕ 37,500 ರೂಪಾಯಿ.