ಭಾರತ ಮಸಾಲೆ ಪದಾರ್ಥಗಳಿಗೆ ಪ್ರಸಿದ್ಧಿ ಪಡೆದಿರುವ ದೇಶ. ಅನಾದಿ ಕಾಲದಿಂದಲೂ ಭಾರತದ ಮಸಾಲೆಗಳು ಇಡೀ ಜಗತ್ತನ್ನೇ ಆಕರ್ಷಿಸುತ್ತಿವೆ. ಭಾರತದಲ್ಲಂತೂ ಪ್ರತಿ ಮನೆಗಳಲ್ಲೂ ಮಸಾಲೆಗಳ ಬಳಕೆ ಕಾಮನ್, ಆದರೆ ಕೆಲವೊಂದು ಮಸಾಲೆ ಪದಾರ್ಥಗಳ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಯನ್ನುಂಟುಮಾಡುತ್ತದೆ.
ಅವುಗಳಲ್ಲೊಂದು ಕೆಂಪು ಮೆಣಸಿನಕಾಯಿ. ಕೆಲವರು ಅಡುಗೆಗೆ ಕೆಂಪು ಮೆಣಸಿನಕಾಯಿ ಪುಡಿಯನ್ನು ಅತಿಯಾಗಿ ಬಳಸ್ತಾರೆ. ಈ ಅಭ್ಯಾಸ ದೇಹಕ್ಕೆ ಬಹಳಷ್ಟು ಸಮಸ್ಯೆ ಉಂಟುಮಾಡಬಹುದು. ಕೆಂಪು ಮೆಣಸಿನಕಾಯಿ ಪುಡಿಯನ್ನು ಯಾವುದೇ ಖಾದ್ಯಕ್ಕೆ ಸೇರಿಸಿದರೂ ರುಚಿ ಹೆಚ್ಚಾಗುತ್ತದೆ. ಸಾಂಬಾರ್, ರಸಂ, ವಿವಿಧ ಪಲ್ಯಗಳು, ರೈಸ್ ಬಾತ್ ಇವುಗಳಿಗೆಲ್ಲ ಮೆಣಸಿನ ಪುಡಿ ಬಳಸ್ತಾರೆ. ಮೆಣಸಿನ ಪುಡಿ ಇಲ್ಲದೇ ಇದ್ದರೆ ಕೆಲವೊಂದು ಖಾದ್ಯಗಳು ಅಪೂರ್ಣವೆನಿಸುತ್ತವೆ.
ಅತಿಸಾರ: ಕೆಂಪು ಮೆಣಸಿನಕಾಯಿಯನ್ನು ಹೆಚ್ಚಾಗಿ ತಿನ್ನುವುದರಿಂದ ಅತಿಸಾರ ಉಂಟಾಗುವ ಅಪಾಯವಿದೆ. ಇದು ನಮ್ಮ ಹೊಟ್ಟೆಗೆ ಒಳ್ಳೆಯದಲ್ಲ, ಇದನ್ನು ಸೀಮಿತ ಪ್ರಮಾಣದಲ್ಲಿ ತಿನ್ನಬೇಕು. ಸಾಮಾನ್ಯವಾಗಿ ನಾವು ಮಸಾಲೆಗಳನ್ನು ಡೀಪ್ ಫ್ರೈ ಮಾಡಿದಾಗ, ಅದು ಹೊಟ್ಟೆಯ ಒಳಭಾಗಕ್ಕೆ ಅಂಟಿಕೊಳ್ಳುವ ಮೂಲಕ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಆಸಿಡಿಟಿ: ಕೆಂಪು ಮೆಣಸಿನ ಪುಡಿ ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಉಂಟುಮಾಡಬಹುದು. ಇದು ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ಸೃಷ್ಟಿಸುತ್ತದೆ. ಹಾಗೆಯೇ ಕೆಲವರು ಎದೆಯುರಿ ಎಂದು ದೂರುತ್ತಾರೆ. ನಿಮಗೆ ಅಂತಹ ಸಮಸ್ಯೆ ಇದ್ದರೆ, ತಕ್ಷಣ ಕೆಂಪು ಮೆಣಸಿನಕಾಯಿಯನ್ನು ಸೇವಿಸುವುದನ್ನು ನಿಲ್ಲಿಸಿ.
ಹೊಟ್ಟೆ ಹುಣ್ಣು : ಸಾಮಾನ್ಯವಾಗಿ ವೈದ್ಯರುಕೆಂಪು ಮೆಣಸಿನಕಾಯಿಯನ್ನು ಹೆಚ್ಚಾಗಿ ತಿನ್ನದಂತೆ ಸಲಹೆ ನೀಡುತ್ತಾರೆ. ಏಕೆಂದರೆ ಅದರಿಂದ ಹೊಟ್ಟೆ ಹುಣ್ಣು ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಮೆಣಸಿನ ಪುಡಿ ತುಂಬಾ ಅಪಾಯಕಾರಿ. ಇದರ ಕಣಗಳು ಹೊಟ್ಟೆ ಮತ್ತು ಕರುಳಿಗೆ ಅಂಟಿಕೊಳ್ಳುತ್ತವೆ ಮತ್ತು ಹುಣ್ಣುಗಳನ್ನು ಉಂಟುಮಾಡುತ್ತವೆ.