alex Certify 3 ಸಾವಿರ ಕೋಟಿ ಆಸ್ತಿಗೆ ಒಡೆಯ ದಕ್ಷಿಣದ ಶ್ರೀಮಂತ ಸೂಪರ್ ಸ್ಟಾರ್; ಈ ಪಟ್ಟಿಯಲ್ಲಿಲ್ಲ ರಜನಿಕಾಂತ್, ಚಿರಂಜೀವಿ ಮತ್ತು ಪ್ರಭಾಸ್ ಹೆಸರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3 ಸಾವಿರ ಕೋಟಿ ಆಸ್ತಿಗೆ ಒಡೆಯ ದಕ್ಷಿಣದ ಶ್ರೀಮಂತ ಸೂಪರ್ ಸ್ಟಾರ್; ಈ ಪಟ್ಟಿಯಲ್ಲಿಲ್ಲ ರಜನಿಕಾಂತ್, ಚಿರಂಜೀವಿ ಮತ್ತು ಪ್ರಭಾಸ್ ಹೆಸರು…!

ದಕ್ಷಿಣ ಭಾರತದಲ್ಲಿ ಸಿನೆಮಾಕ್ಕೆ ವಿಶೇಷ ಸ್ಥಾನಮಾನವಿದೆ. ರಜನಿಕಾಂತ್, ಚಿರಂಜೀವಿ ಸೇರಿದಂತೆ ಅನೇಕ ಸ್ಟಾರ್‌ ನಟರಿಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಜನರು ಅವರನ್ನು ಆರಾಧಿಸುತ್ತಾರೆ. ಈ ನಟರು ಜನಪ್ರಿಯತೆಯ ಜೊತೆಗೆ ಅಪಾರ ಸಂಪತ್ತನ್ನೂ ಗಳಿಸಿದ್ದಾರೆ. ಸಿನೆಮಾ ಸಂಭಾವನೆ, ಜಾಹೀರಾತು, ಅನೇಕ ಬ್ರಾಂಡ್‌ಗಳ ಮೂಲಕ ನಟರು ಹಣ ಗಳಿಸುತ್ತಾರೆ. ಅನೇಕರು ನಟನೆಯ ಜೊತೆಜೊತೆಗೆ ಉದ್ಯಮದಲ್ಲೂ ತೊಡಗಿಕೊಂಡಿದ್ದಾರೆ.

ದಕ್ಷಿಣ ಭಾರತದ ಯಶಸ್ವಿ ತಾರೆಯರ ಪೈಕಿ ಅತ್ಯಂತ ಶ್ರೀಮಂತರು ಯಾರು? ಯಾರ ಬಳಿ 3 ಸಾವಿರ ಕೋಟಿಗೂ ಅಧಿಕ ಮೊತ್ತದ ಆಸ್ತಿಯಿದೆ ಗೊತ್ತೇ? ಅವರೇ ದಕ್ಷಿಣದ ಸೂಪರ್ ಸ್ಟಾರ್ ನಾಗಾರ್ಜುನ ಅಕ್ಕಿನೇನಿ. ಹೌದು, ನಾಗಾರ್ಜುನ ಅಕ್ಕಿನೇನಿ ಸೌತ್‌ ಸಿನೆಮಾ ಇಂಡಸ್ಟ್ರಿಯ ಅತ್ಯಂತ ಶ್ರೀಮಂತ ನಟ. 3 ಸಾವಿರ ಕೋಟಿಗೂ ಹೆಚ್ಚು ನಿವ್ವಳ ಆಸ್ತಿಯನ್ನು ಇವರು ಹೊಂದಿದ್ದಾರೆ. 30 ವರ್ಷಗಳಿಂದ ತೆಲುಗು ಇಂಡಸ್ಟ್ರಿಯನ್ನು ಆಳುತ್ತಿರುವ ನಾಗಾರ್ಜುನ ಅಕ್ಕಿನೇನಿ ಹಲವು ಹಿಂದಿ ಚಿತ್ರಗಳಲ್ಲಿಯೂ ತಮ್ಮ ನಟನಾ ಕೌಶಲ್ಯವನ್ನು ತೋರಿಸಿದ್ದಾರೆ.

ವರದಿಗಳ ಪ್ರಕಾರ ನಾಗಾರ್ಜುನ ಅವರ ಆಸ್ತಿ 3 ಸಾವಿರ ಕೋಟಿ ಮೀರಿದೆ. ನಾಗಾರ್ಜುನ ಸಿನಿಮಾದ ಹೊರತಾಗಿ ಬೇರೆ ವ್ಯವಹಾರಗಳಿಂದಲೂ ಆದಾಯ ಗಳಿಸುತ್ತಾರೆ. 2022 ರಲ್ಲಿ ನಾಗಾರ್ಜುನ ಅವರ ಆಸ್ತಿ ಮೌಲ್ಯ 3010 ಕೋಟಿ ರೂಪಾಯಿ ಇತ್ತು. 63 ವರ್ಷದ ನಾಗಾರ್ಜುನ ಅಕ್ಕಿನೇನಿ ಚಿತ್ರವೊಂದಕ್ಕೆ 9 ರಿಂದ 20 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಬ್ರಾಂಡ್ ಎಂಡೋರ್ಸ್‌ಮೆಂಟ್‌ಗೆ ಶುಲ್ಕವಾಗಿ 2 ಕೋಟಿ ತೆಗೆದುಕೊಳ್ಳುತ್ತಾರೆ.

ಈ ಹಿಂದೆ ನಾಗಾರ್ಜುನ ‘ಮಾ ಟಿವಿ’ಯ ಮಾಲೀಕರಾಗಿದ್ದರು. ನಂತರ ಅವರು ಅದನ್ನು ‘ಸ್ಟಾರ್ ಮಾ’ಗೆ ಮಾರಾಟ ಮಾಡಿದರು. ಅವರ ತಂದೆ ನಾಗೇಶ್ವರ ರಾವ್ ಅವರು ಆರಂಭಿಸಿದ ಅನ್ನಪೂರ್ಣ ಸ್ಟುಡಿಯೋದಲ್ಲಿ ನಾಗಾರ್ಜುನ ಕೂಡ ಪಾಲುದಾರರಾಗಿದ್ದಾರೆ. ಅವರ ಹೆಸರಲ್ಲಿ ಹೈದರಾಬಾದ್‌ನಲ್ಲಿ ಕನ್ವೆನ್ಷನ್ ಸೆಂಟರ್‌ ಇದೆ, ಮೀಡಿಯಾ ಸ್ಕೂಲ್‌ ಅನ್ನು ಕೂಡ ನಾಗಾರ್ಜುನ ನಡೆಸುತ್ತಿದ್ದಾರೆ.

ದಕ್ಷಿಣದ ಶ್ರೀಮಂತ ನಟರ ಪಟ್ಟಿಯಲ್ಲಿ ಯಾರಿದ್ದಾರೆ?

ದಕ್ಷಿಣ ಭಾರತದ ಶ್ರೀಮಂತ ನಟರ ಪಟ್ಟಿಯಲ್ಲಿ ನಾಗಾರ್ಜುನ ಹೆಸರು ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿರೋ ವೆಂಕಟೇಶ್ ಅವರ ಆಸ್ತಿ 2,200 ಕೋಟಿ. ಚಿರಂಜೀವಿ 1,650 ಕೋಟಿ ಆಸ್ತಿಯೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಚಿರಂಜೀವಿ ಅವರ ಪುತ್ರ ರಾಮ್ ಚರಣ್ 1,370 ಕೋಟಿ ಆಸ್ತಿಯೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.ಜೂನಿಯರ್ ಎನ್‌ಟಿಆರ್ 450 ಕೋಟಿ ಆಸ್ತಿಯೊಂದಿಗೆ ಐದನೇ ಸ್ಥಾನದಲ್ಲಿದ್ದರೆ, ದಳಪತಿ ವಿಜಯ್ (445 ಕೋಟಿ), ರಜನಿಕಾಂತ್ (430 ಕೋಟಿ), ಕಮಲ್ ಹಾಸನ್ (388 ಕೋಟಿ), ಮೋಹನ್ ಲಾಲ್ (376 ಕೋಟಿ) ಮತ್ತು ಅಲ್ಲು ಅರ್ಜುನ್ 350 ನಿವ್ವಳ ಆಸ್ತಿಯನ್ನು ಹೊಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...