alex Certify ತೂಕ ಇಳಿಸುವಲ್ಲಿ ಸಹಕಾರಿ ದಕ್ಷಿಣ ಭಾರತದ ಈ ಆಹಾರ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೂಕ ಇಳಿಸುವಲ್ಲಿ ಸಹಕಾರಿ ದಕ್ಷಿಣ ಭಾರತದ ಈ ಆಹಾರ……!

ಭಾರತದಲ್ಲಿ ಬಗೆ ಬಗೆಯ, ರುಚಿ ರುಚಿಯ ಆಹಾರದ ಸವಿ ಸವಿಯಬಹುದು. ಒಂದೊಂದು ಪ್ರದೇಶದಲ್ಲಿ ಒಂದೊಂದು ಆಹಾರ ಪ್ರಸಿದ್ಧಿ ಪಡೆದಿದೆ. ದಕ್ಷಿಣ ಭಾರತದ ಆಹಾರಗಳ ಪಟ್ಟಿಯಲ್ಲಿ ಇಡ್ಲಿ, ಸಾಂಬಾರ್, ದೋಸೆ, ರಸಂ ಹೀಗೆ ಅನೇಕ ಆಹಾರಗಳನ್ನು ನಾವು ನೋಡ್ಬಹುದು. ದಕ್ಷಿಣ ಭಾರತದ ಅಡುಗೆಯ ರುಚಿ ಭಿನ್ನವಾಗಿರುತ್ತದೆ. ಹಾಗೆಯೇ ಈ ಅಡುಗೆಗಳು ನಮ್ಮ ತೂಕ ಇಳಿಸಲು ನೆರವಾಗುತ್ತವೆ. ಹೌದು, ದಕ್ಷಿಣ ಭಾರತದ ಅಡುಗೆಗಳಲ್ಲಿ ಕ್ಯಾಲೋರಿ ಕಡಿಮೆಯಿದ್ದು, ಅವು ತೂಕ ಇಳಿಸಲು ನೆರವಾಗುತ್ತವೆ.

ತೂಕ ಇಳಿಸಬೇಕೆನ್ನುವವರು ಕೆಲವೊಂದು ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲನೆ ಮಾಡಬೇಕು. ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬೆಚ್ಚನೆ ನೀರಿಗೆ ನಿಂಬೆ ಹಣ್ಣಿನ ರಸವನ್ನು ಬೆರೆಸಿ ಕುಡಿಯಬೇಕು. ಇದು ತೂಕ ಇಳಿಸಲು ನೆರವಾಗುತ್ತದೆ.

ಹಾಗೆಯೇ ಎಂದಿಗೂ ಬೆಳಗಿನ ಉಪಹಾರವನ್ನು ಬಿಡಬಾರದು. ಅದು ಇಡೀ ದಿನ ಶಕ್ತಿ ನೀಡುತ್ತದೆ. ಬೆಳಗಿನ ಉಪಹಾರಕ್ಕೆ ದಕ್ಷಿಣ ಭಾರತದ ಆಹಾರ ಹೇಳಿ ಮಾಡಿಸಿದಂತಿದೆ. ನೀವು ಇಡ್ಲಿ, ಸಾಂಬಾರ್, ಪೊಂಗಲ್, ತೆಂಗಿನಕಾಯಿ ಚಟ್ನಿ, ದೋಸೆ ಇವುಗಳಲ್ಲಿ ಯಾವುದನ್ನಾದ್ರೂ ಸೇವನೆ ಮಾಡಬಹುದು.

ಮಧ್ಯಾಹ್ನದ ಊಟಕ್ಕೆ ಮಧ್ಯಾಹ್ನದ ರಾಗಿ ಮುದ್ದೆ ಬೆಸ್ಟ್, ಎರಡು ರಾಗಿ ಮುದ್ದೆ ಜೊತೆ ಕರಿ, ಮಜ್ಜಿಗೆ, ಸಾಂಬಾರು, ಅನ್ನ ಸೇವಿಸಬಹುದು. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ.

ಸಂಜೆ ಸಮಯದಲ್ಲಿ ಸ್ನ್ಯಾಕ್ಸ್ ಬೇಕು ಎನ್ನುವವರು ಗ್ರೀನ್ ಟೀ ಸೇವನೆ ಮಾಡಬಹುದು. ಇಲ್ಲವೆ ಬ್ಲಾಕ್ ಕಾಫಿ ಸೇವಿಸಬಹುದು. ಇದ್ರ ಜೊತೆ ಮಲ್ಟಿಗ್ರೇನ್ ಬಿಸ್ಕತ್ ಹಾಗೂ ಪಿಸ್ತಾ ತಿನ್ನಬಹುದು.

ತಜ್ಞರ ಪ್ರಕಾರ, ರಾತ್ರಿ ಭೋಜನವು ಹಗುರವಾಗಿರಬೇಕು. ಪಾಲಕ್ ದಾಲ್, ಮೊಸರು, ತರಕಾರಿ ಕರಿ, ಬ್ರೌನ್ ರೈಸ್, ಮೊಳಕೆ ಸಲಾಡ್, ಕೇರಳ ಶೈಲಿಯ ಮೀನುಗಳನ್ನು ಸಹ ಸೇವಿಸಬಹುದು. ಇದಲ್ಲದೆ ಮಲಗುವ ಮುನ್ನ ಒಂದು ಕಪ್ ಹಾಲಿಗೆ ಅರಿಶಿನ ಬೆರೆಸಿ ಕುಡಿದರೆ ಒಳ್ಳೆಯದು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...