ದೇವಾಲಯಗಳಿಗೆ ಭೇಟಿ ನೀಡುವಾಗ ಭಕ್ತರು ತಮ್ಮ ಚಪ್ಪಲಿ ಬಗ್ಗೆ ಬಹಳಷ್ಟು ಕಾಳಜಿ ವಹಿಸುತ್ತಾರೆ. ಏಕೆಂದರೆ ಅಲ್ಲಿ ಚಪ್ಪಲಿ ಕಳ್ಳತನ ಸಾಮಾನ್ಯ ಸಂಗತಿ.
ಆದರೆ, ಈ ಚಪ್ಪಲ್ ಚೋರ್ ಅನ್ನು ಎಂದಿಗೂ ನೋಡಿರಲು ಸಾಧ್ಯವೇ ಇಲ್ಲ. ಏಕೆಂದರೆ ಈ ಚಪ್ಪಲ್ ಚೋರ್ ಒಂದು ಹಾವು.
ನಿಜ, ಹಾವೊಂದು ಚಪ್ಪಲಿ ಕಚ್ಚಿಕೊಂಡು ಹೋಗುವ ವಿಡಿಯೋ ವೈರಲ್ ಆಗಿದ್ದು, ಹಾವಿನ ಈ ಸಾಹಸ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಈ ಹಾವು ಆ ಚಪ್ಪಲಿಯನ್ನು ಏನು ಮಾಡುತ್ತದೆ. ಅದಕ್ಕೆ ಕಾಲುಗಳಿಲ್ಲವಲ್ಲ ಎಂದು ಶೀರ್ಷಿಕೆಯಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಬಾಯಿಯಲ್ಲಿ ಚಪ್ಪಲಿ ಕಚ್ಚಿಕೊಂಡ ಹಾವು ವೇಗವಾಗಿ ಸರಿದು ಹೋಗುತ್ತದೆ. ಈ ವೀಡಿಯೊ ಬಿಹಾರದ್ದೆಂದು ಹಲವರು ಗಮನ ಸೆಳೆದಿದ್ದು, ಲಕ್ಷಾಂತರ ವೀಕ್ಷಣೆ ಕಂಡಿದೆ. ಅನೇಕರು ರೋಚಕ ಕಾಮೆಂಟ್ ಮಾಡಿದ್ದಾರೆ.