alex Certify ಕೇವಲ 1 ನಿಮಿಷದಲ್ಲಿ ಸ್ತನ ಕ್ಯಾನ್ಸರ್ ಪತ್ತೆ ಮಾಡಬಲ್ಲದು ಈ ಸ್ಮಾರ್ಟ್‌ ಬ್ರಾ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ 1 ನಿಮಿಷದಲ್ಲಿ ಸ್ತನ ಕ್ಯಾನ್ಸರ್ ಪತ್ತೆ ಮಾಡಬಲ್ಲದು ಈ ಸ್ಮಾರ್ಟ್‌ ಬ್ರಾ…..!

ಮಹಿಳೆಯರಿಗೆ ಸ್ತನ ಕ್ಯಾನ್ಸರ್ ದೊಡ್ಡ ಸಮಸ್ಯೆಯಾಗುತ್ತಿದೆ. ಜಗತ್ತಿನಲ್ಲಿ ಲಕ್ಷಾಂತರ ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ. ಈ ಮಾರಕ ಕಾಯಿಲೆಯನ್ನು ಆರಂಭದಲ್ಲಿ ಪತ್ತೆ ಮಾಡುವುದು ಕೂಡ ಕಷ್ಟವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲೆಂದೇ ಐಐಟಿ ಕಾನ್ಪುರದ ಸಂಶೋಧಕರೊಬ್ಬರು ಸ್ಮಾರ್ಟ್ ಬ್ರಾವನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಮೊದಲ ಹಂತದಲ್ಲಿಯೇ ಸ್ತನ ಕ್ಯಾನ್ಸರ್ ಅನ್ನು ಪತ್ತೆಹಚ್ಚಬಲ್ಲದು.

ಸಂಶೋಧಕಿ ಶ್ರೇಯಾ ನಾಯರ್, ಬಯೋಸೈನ್ಸ್ ಮತ್ತು ಬಯೋ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ. ಅಮಿತಾಭ್ ಬಂಡೋಪಾಧ್ಯಾಯ ಅವರ ಮೇಲ್ವಿಚಾರಣೆಯಲ್ಲಿ ಈ ಸ್ಮಾರ್ಟ್ ಬ್ರಾ ಸಿದ್ಧಪಡಿಸಿದ್ದಾರೆ.

ಕ್ಯಾನ್ಸರ್‌ ಪತ್ತೆ ಮಾಡಬಲ್ಲ ಸ್ಮಾರ್ಟ್ ಬ್ರಾ..!

ಈ ಸ್ಮಾರ್ಟ್ ಬ್ರಾ ಅದ್ಭುತವಾಗಿ ಕೆಲಸ ಮಾಡುತ್ತದೆ. ಇದು ವಿಶೇಷ ರೀತಿಯ ಸಂವೇದಕವನ್ನು ಹೊಂದಿದೆ, ಸ್ತನದಲ್ಲಿನ ಯಾವುದೇ ಬದಲಾವಣೆಯನ್ನು ತಕ್ಷಣವೇ ಪತ್ತೆ ಮಾಡುತ್ತದೆ. ಸ್ತನ ಕ್ಯಾನ್ಸರ್‌ನ  ಆರಂಭಿಕ ಲಕ್ಷಣಗಳು ಕಾಣಿಸಿಕೊಂಡರೆ, ಈ ಸಂವೇದಕವು ತಕ್ಷಣವೇ ಎಚ್ಚರಿಕೆಯನ್ನು ಕಳುಹಿಸುತ್ತದೆ. ಈ ರೀತಿಯಾಗಿ ಮಹಿಳೆಯರು ಆರಂಭಿಕ ಹಂತದಲ್ಲಿ ರೋಗವನ್ನು ಕಂಡುಹಿಡಿಯಬಹುದು ಮತ್ತು ಚಿಕಿತ್ಸೆ ಪಡೆಯಬಹುದು. ಈ ಸ್ಮಾರ್ಟ್ ಬ್ರಾದ ಮೂಲ ಮಾದರಿಯು ಸಿದ್ಧವಾಗಿದ್ದು, ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲಾಗುತ್ತಿದೆ.

ಈ ಬ್ರಾವನ್ನು ದಿನಕ್ಕೆ ಒಂದು ನಿಮಿಷ ಮಾತ್ರ ಧರಿಸಬೇಕು. ಬ್ರಾ ಮೊಬೈಲ್‌ಗೆ ಕನೆಕ್ಟ್‌ ಆಗಿರುತ್ತದೆ, ಸಂಪೂರ್ಣ ಡೇಟಾವನ್ನು ಸಹ ಉತ್ಪಾದಿಸುತ್ತದೆ. ಸಂವೇದಕವು ಯಾವುದೇ ಅಸಹಜತೆಯನ್ನು ಪತ್ತೆ ಮಾಡಿದರೆ, ಅದು ಮೊಬೈಲ್‌ಗೆ ಸಂದೇಶವನ್ನು ಕಳುಹಿಸುತ್ತದೆ ಮತ್ತು ವೈದ್ಯರನ್ನು ಸಂಪರ್ಕಿಸಲು ಮಹಿಳೆಗೆ ಸಲಹೆ ನೀಡುತ್ತದೆ.

ಈ ಸ್ಮಾರ್ಟ್ ಬ್ರಾ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದ್ದು ಒಂದು ವರ್ಷದೊಳಗೆ ಮಾರುಕಟ್ಟೆಗೆ ಬರಬಹುದು. ಇದರ ಬೆಲೆ ಸುಮಾರು ಐದು ಸಾವಿರ ರೂಪಾಯಿಗಳಾಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...