
ಕೆಲ ವರ್ಷದ ಹಿಂದೆ ಕಾಲಿವುಡ್ ಸ್ಟಾರ್ ಗಳ ವೈಯಕ್ತಿಕ ಫೋಟೋ ಮತ್ತು ವಿಡಿಯೋ ಹರಿಬಿಟ್ಟು ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಚಿಸಿದ್ದ ಗಾಯಕಿ ಸುಚಿತ್ರಾ ಇದೀಗ ನಟ ಧನುಷ್ ಮತ್ತು ಅವರ ಪತ್ನಿ ಐಶ್ವರ್ಯ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಇಬ್ಬರೂ ಪರಸ್ಪರ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಐಶ್ವರ್ಯಾ ಅವರನ್ನು ಕೆಟ್ಟ ತಾಯಿ ಎಂದು ಕರೆದ ಸುಚಿತ್ರಾ, ಧನುಷ್ ತನ್ನ ತಂದೆಯ ಕರ್ತವ್ಯಗಳನ್ನು ಪೂರೈಸುತ್ತಿದ್ದಾರೆ ಎಂದಿದ್ದಾರೆ.
ಕುಮುದಂ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಗಾಯಕಿ, “ಐಶ್ವರ್ಯಾ, ಧನುಷ್ ತನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಆಕೆ ಮದುವೆಯ ನಂತರ ಅದನ್ನೇ ಮಾಡಿದ್ದಾಳೆ. ಅದು ಡಬಲ್ ಸ್ಟಾಂಡರ್ಡ್, ಅಲ್ವಾ? ಐಶ್ವರ್ಯ, ಧನುಷ್ಗೆ ಮೋಸ ಮಾಡಿದ್ದಾರೆ, ಧನುಷ್, ಐಶ್ವರ್ಯಾಗೆ ಮೋಸ ಮಾಡಿದ್ದಾರೆ ಅವರು ವ್ಯವಸ್ಥಿತವಾಗಿ ಪರಸ್ಪರ ಮೋಸ ಮಾಡುತ್ತಿರುವ ದಂಪತಿಗಳು.
“ಇಬ್ಬರೂ ಬೇರೆಯವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು. ಅವರು ಬಾರ್ನಲ್ಲಿ ಕುಳಿತು ಅವರು ಡೇಟಿಂಗ್ ಮಾಡುತ್ತಿರುವ ವ್ಯಕ್ತಿಯೊಂದಿಗೆ ಪಾನೀಯ ಸೇವಿಸಿದ್ದಾರೆ” ಎಂದರು ಇದಕ್ಕೆ ಪ್ರತಿಯಾಗಿ ಡೇಟ್ಗೆ ಹೋಗುವುದು ಅಸಹಜವಲ್ಲ ಎಂದು ವಾದಿಸಿದಾಗ, ಸುಚಿತ್ರಾ, “ನೀವು ಮದುವೆಯಾದ ಮೇಲೆ ಬೇರೆಯವರೊಂದಿಗೆ ಡೇಟಿಂಗ್ಗೆ ಹೋಗುತ್ತೀರಾ” ಎಂದು ಪ್ರಶ್ನಿಸಿದ್ದಾರೆ.
ನಟ ಧನುಷ್ ಮತ್ತು ಸೂಪರ್ಸ್ಟಾರ್ ರಜನಿಕಾಂತ್ ಅವರ ಪುತ್ರಿ – ನಿರ್ಮಾಪಕಿ ಐಶ್ವರ್ಯ ಚೆನ್ನೈ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಎರಡು ವರ್ಷಗಳ ಹಿಂದೆ ದಂಪತಿ ಬೇರೆಬೇರೆಯಾಗುತ್ತಿರುವುದಾಗಿ ಘೋಷಿಸಿದರು.
ಧನುಷ್ ಮತ್ತು ಐಶ್ವರ್ಯ 2004 ರಲ್ಲಿ ವಿವಾಹವಾದರು . ಅವರಿಗೆ 2006 ಮತ್ತು 2010 ರಲ್ಲಿ ಜನಿಸಿದ ಯಾತ್ರಾ ಮತ್ತು ಲಿಂಗ ಎಂಬ ಇಬ್ಬರು ಗಂಡು ಮಕ್ಕಳಿಗೆ ಪೋಷಕರಾಗಿದ್ದಾರೆ.