ಸುರಕ್ಷಿತ ಪ್ರಯಾಣಕ್ಕಾಗಿ, ಅಪಘಾತಗಳನ್ನು ತಪ್ಪಿಸಲು ಯಾವಾಗಲೂ ವೇಗದ ಮಿತಿಯಲ್ಲಿ ಚಾಲನೆ ಮಾಡಲು ಸಲಹೆ ನೀಡಲಾಗುತ್ತದೆ. ಆದರೆ ಹೆಚ್ಚಿನ ಜನರು ಅದನ್ನು ಪಾಲಿಸುವುದಿಲ್ಲ.
ಅದರಲ್ಲಿಯೂ ರಸ್ತೆಗಳು ಚೆನ್ನಾಗಿದ್ದರಂತೂ ಮುಗಿದೇ ಹೋಯಿತು. ಆದರೆ ಇದೇ ಎಷ್ಟೊಂದು ಸಮಸ್ಯೆಗಳನ್ನು ತಂದೊಡ್ಡಬಲ್ಲುದು ಎಂದು ತಿಳಿಸುವ ಕಾರಿನ ಅಪಘಾತದ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋವನ್ನು ಚಾಲಕರ ರಕ್ಷಣೆಗಾಗಿ ತೋರಿಸಲಾಗಿದೆ. ಕಾರು ಎಷ್ಟು ವೇಗದಲ್ಲಿ ಇದ್ದರೆ, ಯಾವ ರೀತಿಯ ಅಪಾಯ ಆಗುತ್ತದೆ ಎನ್ನುವುದನ್ನು ಇದು ತೋರಿಸುತ್ತದೆ.
ಮೊದಲಿಗೆ ಕಾರು 50 mph ವೇಗದಲ್ಲಿದ್ದಾಗ ಅಪಘಾತ ಸಂಭವಿಸಿದರೆ ಹೇಗೆ ಹಾನಿಯಾಗುತ್ತದೆ ಎನ್ನುವುದರಿಂದ ವಿಡಿಯೋ ಶುರುವಾಗುತ್ತದೆ. ನಂತರ ಕಾರಿನ ವೇಗ 80 mph ನಲ್ಲಿ ಇದ್ದಾಗ ಅಪಘಾತವಾದರೆ ಏನಾಗಬಹುದು ಎನ್ನುವದರಿಂದ ಹಿಡಿದು ಕಾರಿನ ವೇಗವನ್ನುಹೆಚ್ಚು ಮಾಡುತ್ತಾ ಅಪಘಾತದ ಪ್ರಮಾಣವನ್ನು ತೋರಿಸಲಾಗಿದೆ.
ಇದರಲ್ಲಿ ಕಾರು 120 mph ವೇಗ, 180mph ವೇಗ, 200 mph ಮತ್ತು 260 mph ವೇಗದ ಕುರಿತು ತೋರಿಸಲಾಗಿದೆ. ಸ್ವಲ್ಪ ವೇಗದಲ್ಲಿ ಇದ್ದರೆ ಕಾರಿನ ಮುಂಭಾಗಕ್ಕೆ ಹಾನಿಯಾಗುವುದರಿಂದ ಹಿಡಿದು ಸ್ಪೀಡ್ ಹೆಚ್ಚಿದಂತೆ ಹೇಗೆ ಪ್ರಾಣವನ್ನು ಕಳೆದುಕೊಳ್ಳಬಹುದು ಎಂಬುದನ್ನು ಸುಂದರವಾಗಿ ಈ ವಿಡಿಯೋದಲ್ಲಿ ತೋರಿಸಲಾಗಿದೆ.