ದೇಹದಲ್ಲಿ ಕೊಬ್ಬಿನ ಅಂಶ ಜಾಸ್ತಿಯಾದ್ರೆ ತೂಕ ಕೂಡ ಮಿತಿ ಮೀರುತ್ತದೆ. ಅತಿಯಾಗಿ ದಪ್ಪಗಾಗೋದ್ರಿಂದ ಅಪಾಯ ತಪ್ಪಿದ್ದಲ್ಲ.
ಕಿಡ್ನಿ, ಹೃದಯ, ಲಿವರ್ ಹಾಗೂ ಸ್ನಾಯುಗಳಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ. ನಿಯಮಿತವಾದ ವ್ಯಾಯಾಮದ ಜೊತೆಗೆ ಡಯಟ್ ಮಾಡೋದ್ರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. ಅದಕ್ಕಾಗಿ ದೇಹದಲ್ಲಿನ ಕೊಬ್ಬು ಕರಗಿಸುವಂತಹ ಆಹಾರಗಳನ್ನು ಸೇವಿಸಬೇಕು.
ನಿಮ್ಮ ದೇಹದಲ್ಲಿರುವ ಕ್ಯಾಲೋರಿ ಬರ್ನ್ ಮಾಡಿ ತೂಕ ಕಡಿಮೆ ಮಾಡುವ ಸಿಂಪಲ್ ಪಾನೀಯವೊಂದಿದೆ, ಅದನ್ನು ನೀವು ಕೇವಲ 5 ನಿಮಿಷದಲ್ಲಿ ತಯಾರಿಸಬಹುದು.
ಅಗತ್ಯ ವಸ್ತುಗಳು:
ಕತ್ತರಿಸಿದ ಕೊತ್ತಂಬರಿ ಸೊಪ್ಪು 60 ಗ್ರಾಂ , ಒಂದು ನಿಂಬೆ ಹಣ್ಣು, 4 ಕಪ್ ನೀರು.
ತಯಾರಿಸುವ ವಿಧಾನ :
ಒಂದು ಜಗ್ ನಲ್ಲಿ ನಿಂಬೆ ಹಣ್ಣಿನ ರಸವನ್ನು ಹಿಂಡಿಕೊಳ್ಳಿ, ಅದಕ್ಕೆ ರುಬ್ಬಿದ ಕೊತ್ತಂಬರಿ ಸೊಪ್ಪು ಮತ್ತು ನೀರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸನ್ನು ಸೇವಿಸಿ, ಸತತ 5 ದಿನಗಳವರೆಗೆ ತಪ್ಪದೆ ಇದನ್ನು ಸೇವಿಸಿದರೆ ನಿಮ್ಮ ತೂಕ ಕಡಿಮೆಯಾಗುತ್ತದೆ.
ಇದರಿಂದ ರಕ್ತ ಕೂಡ ಶುದ್ಧವಾಗುತ್ತದೆ. ಇಮ್ಯೂನಿಟಿ ಸುಧಾರಿಸುತ್ತದೆ. ನಿಂಬೆ ರಸ ಅಧಿಕ ರಕ್ತದೊತ್ತಡ ನಿಯಂತ್ರಿಸುತ್ತದೆ, ವಾಕರಿಕೆ ಮತ್ತು ತಲೆ ತಿರುಗುವಿಕೆಯನ್ನು ಕಡಿಮೆ ಮಾಡುತ್ತದೆ. ನಿಮ್ಮ ಚರ್ಮದ ಕಾಂತಿಯನ್ನು ಕಾಪಾಡುತ್ತದೆ.