ಪಾದದ ಆರೈಕೆ ಎಂದಾಕ್ಷಣ ನಾವು ಉಗುರುಗಳನ್ನು ಕತ್ತರಿಸುವುದಕ್ಕೆ ಸೀಮಿತವಾಗಿಡುತ್ತೇವೆ. ಆದ್ರೆ ದೇಹದಲ್ಲಿ ಯಾವುದೇ ಸಮಸ್ಯೆಗಳಾಗಿದ್ದರೆ ಅದರ ಸಂಕೇತ ನಿಮಗೆ ಗೋಚರಿಸುವುದು ಪಾದಗಳಲ್ಲಿ. ಏಕೆಂದರೆ ನಮ್ಮ ಪಾದಗಳು ಹೃದಯ ಮತ್ತು ಬೆನ್ನುಮೂಳೆಯಿಂದ ದೂರದಲ್ಲಿರುತ್ತವೆ. ಅದಕ್ಕಾಗಿಯೇ ಪಾದಗಳನ್ನು ನಿಯಮಿತವಾಗಿ ಗಮನಿಸುತ್ತಿರಬೇಕು. ಕಾಲುಗಳ ಚರ್ಮ, ಉಗುರುಗಳ ಬಣ್ಣ ಅಥವಾ ಆಕಾರದಲ್ಲಿನ ಬದಲಾವಣೆಗಳು ನಮಗೆ ಮುಂಚಿತವಾಗಿ ಅನೇಕ ಗಂಭೀರ ಕಾಯಿಲೆಗಳ ಸೂಚನೆಯನ್ನು ನೀಡುತ್ತದೆ.
ಕಾಲು ಮತ್ತು ಕಾಲ್ಬೆರಳುಗಳ ಮೇಲಿನ ಕೂದಲು ಉದುರುವುದು : ನಿಮ್ಮ ಕಾಲು ಮತ್ತು ಕಾಲ್ಬೆರಳುಗಳ ಮೇಲಿನ ಕೂದಲು ಇದ್ದಕ್ಕಿದ್ದಂತೆ ಉದುರಲು ಪ್ರಾರಂಭಿಸಿದರೆ, ಅದು ರಕ್ತ ಪರಿಚಲನೆಯಲ್ಲಿನ ಸಮಸ್ಯೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಸಾಕಷ್ಟು ರಕ್ತ ಪರಿಚಲನೆ ಇಲ್ಲದೇ ಇದ್ದರೆ ಕಾಲುಗಳ ಮೇಲಿರುವ ಕೂದಲು ಉದುರಲು ಪ್ರಾರಂಭಿಸುತ್ತದೆ ಏಕೆಂದರೆ ಅವುಗಳು ಪೋಷಣೆಯನ್ನು ಪಡೆಯುವುದಿಲ್ಲ. ನಿಮ್ಮ ಹೃದಯವು ನಿಯಮಿತವಾಗಿ ಕಾಲುಗಳನ್ನು ತಲುಪಲು ಸಾಕಷ್ಟು ರಕ್ತವನ್ನು ಪಂಪ್ ಮಾಡುತ್ತಿಲ್ಲ ಎಂಬ ಸಂಕೇತವೂ ಆಗಿರಬಹುದು.
ಕಾಲು ಉಳುಕು ಅಥವಾ ಸೆಳೆತ : ಆಗಾಗ ನಿಮ್ಮ ಪಾದಗಳಲ್ಲಿ ಉಳುಕು ಅಥವಾ ಸೆಳೆತವನ್ನು ಹೊಂದಿದ್ದರೆ, ಅದು ನಿಮ್ಮ ದೇಹದಲ್ಲಿನ ನಿರ್ಜಲೀಕರಣ ಮತ್ತು ಪೋಷಕಾಂಶಗಳ ಕೊರತೆಯನ್ನು ತೋರಿಸುತ್ತದೆ. ನೀವು ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದರೆ, ಹೆಚ್ಚು ಹೆಚ್ಚು ನೀರು ಕುಡಿಯಿರಿ. ಏಕೆಂದರೆ ಸೆಳೆತವು ಸಾಮಾನ್ಯವಾಗಿ ಡಿಹೈಡ್ರೇಶನ್‌ನಿಂದ ಉಂಟಾಗುತ್ತದೆ. ಸೆಳೆತವು ದೀರ್ಘಕಾಲದವರೆಗೆ ಇದ್ದರೆ, ತಕ್ಷಣ ವೈದ್ಯರನ್ನು ಭೇಟಿ ಮಾಡಿ. ಏಕೆಂದರೆ ಇದು ನರಕ್ಕೆ ಹಾನಿಯಾಗುವ ಸಂಕೇತವೂ ಆಗಿರಬಹುದು.
ವಾಸಿಯಾಗದ ಗಾಯ : ಗುಣವಾಗದ ಗಾಯಗಳು ಮಧುಮೇಹದ ಸೂಚನೆಯೂ ಆಗಿರಬಹುದು. ರಕ್ತದಲ್ಲಿನ ಗ್ಲೂಕೋಸ್‌ನ ಅನಿಯಂತ್ರಿತ ಮಟ್ಟವು ಪಾದದವರೆಗಿನ ನರಗಳನ್ನು ಹಾನಿಗೊಳಿಸುತ್ತದೆ. ಇದರರ್ಥ ನಿಮ್ಮ ಪಾದಗಳಿಗೆ ಗಾಯ, ಗುಳ್ಳೆ, ಅದರಲ್ಲಿ ಸೋಂಕು ಇದ್ದರೆ ನಂತರ ಉಲ್ಬಣಗೊಳ್ಳಬಹುದು.ಆದ್ದರಿಂದ ನಿಯಮಿತವಾಗಿ ಪಾದಗಳನ್ನು ನೋಡಿಕೊಳ್ಳಿ. ವಿಶೇಷವಾಗಿ ನಿಮ್ಮ ಕುಟುಂಬದಲ್ಲಿ ಸಕ್ಕರೆ ಕಾಯಿಲೆಯ ರೋಗಿಗಳ ಇತಿಹಾಸವಿದ್ದರೆ ಇದನ್ನು ಗಂಭೀರವಾಗಿ ಪರಿಗಣಿಸಿ. ವಾಸಿಯಾಗದ ಗಾಯವು ಚರ್ಮದ ಕ್ಯಾನ್ಸರ್‌ನ ಲಕ್ಷಣವಾಗಿದೆ. ಇದು ಹೆಬ್ಬೆರಳುಗಳ ನಡುವೆಯೂ ಸಂಭವಿಸಬಹುದು.
ಪಾದಗಳು ತಣ್ಣಗಿರುವುದು: ಪಾದಗಳು ಯಾವಾಗಲೂ ತಣ್ಣಗಿರುವುದು ಹೈಪೋಥೈರಾಯ್ಡಿಸಮ್‌ನ ಸಂಕೇತವಾಗಿದೆ. ಈ ಸಮಸ್ಯೆ ಇದ್ದರೆ ನಿಮ್ಮ ಪಾದಗಳು ಬೆಚ್ಚಗಿರುವುದಿಲ್ಲ. 40 ವರ್ಷದ ನಂತರ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಕೂದಲು ಉದುರುವಿಕೆ, ಆಯಾಸ, ಹಠಾತ್ ತೂಕ ಹೆಚ್ಚಾಗುವುದು, ಮಲಬದ್ಧತೆ ಮತ್ತು ಖಿನ್ನತೆಯಂತಹ ಹೈಪೋಥೈರಾಯ್ಡಿಸಮ್‌ನ ಇತರ ಅನಾನುಕೂಲತೆಗಳಿವೆ. ಪಾದ ತಣ್ಣಗಿದ್ದರೆ ಅದನ್ನು ಕಡೆಗಣಿಸದೇ ವೈದ್ಯರನ್ನು ಸಂಪರ್ಕಿಸಿ.
ಇದಲ್ಲದೆ ಹೆಬ್ಬೆರಳು ಇದ್ದಕ್ಕಿದ್ದಂತೆ ಊದಿಕೊಂಡರೆ ಅಥವಾ ಕೆಂಪಾಗಿದ್ದರೆ, ಕೀಲುಗಳಲ್ಲಿ ನೋವು ಕಂಡುಬಂದರೆ ಅದು ಸಂಧಿವಾತದ ಲಕ್ಷಣವಾಗಿರಬಹುದು. ನಿಮಗೆ ಹಿಮ್ಮಡಿ ನೋವು ಇದ್ದರೆ ಬೂಟುಗಳನ್ನು ಬದಲಾಯಿಸಬೇಕಾಗಿದೆ ಎಂದರ್ಥ.