ನವರಾತ್ರಿ ಹಬ್ಬವನ್ನು ಸಂಭ್ರಮದಿಂದ ದೇಶದಾದ್ಯಂತ ಆಚರಿಸಲಾಗ್ತಿದೆ. ನವರಾತ್ರಿಯಲ್ಲಿ ಬೀಳುವ ಕನಸು ಅಥವಾ ನಡೆಯವ ಘಟನೆಗಳು ಭವಿಷ್ಯದ ಆಗು ಹೋಗುಗಳಿಗೆ ಮುನ್ಸೂಚನೆ ನೀಡುತ್ತವೆ. ನವರಾತ್ರಿ ಸಂದರ್ಭದಲ್ಲಿ ಕೆಲ ಭಾಗ್ಯಶಾಲಿಗಳಿಗೆ ಸ್ವಪ್ನದಲ್ಲಿ ತಾಯಿ ಕಾಣಿಸಿಕೊಳ್ತಾಳೆ.
ಬೇರೆ ಬೇರೆ ರೀತಿಯ ಸ್ವಪ್ನಗಳನ್ನು ನಾವು ಕಾಣ್ತೇವೆ. ಕೆಲವು ಭಯ ಹುಟ್ಟಿಸುವಂತಿರುತ್ತದೆ. ಕೆಲವು ಮನಸ್ಸಿಗೆ ಮುದ ನೀಡುತ್ತದೆ. ಹಾಗೆ ಕೆಲವರ ಕನಸಿನಲ್ಲಿ ದೇವರು ಕಾಣಿಸಿಕೊಳ್ತಾನೆ. ಭಕ್ತರು ಖುಷಿಯಾಗ್ತಾರೆ. ಶಾಸ್ತ್ರಗಳ ಪ್ರಕಾರ ಕನಸಿನಲ್ಲಿ ಭಗವಂತ ಕಾಣಿಸಿಕೊಳ್ಳುವುದು ಸುಖ-ದುಃಖ ಎರಡರ ಸಂಕೇತವೂ ಆಗಿದೆ. ಕನಸಿನಲ್ಲಿ ಯಾವ ರೂಪದಲ್ಲಿ ಮತ್ತು ಹೇಗೆ ಭಗವಂತ ಕಾಣಿಸಿಕೊಳ್ತಾನೆ ಎಂಬುದು ಮಹತ್ವ ಪಡೆಯುತ್ತದೆ.
ಅನೇಕ ಬಾರಿ ಕನಸಿನಲ್ಲಿ ಬರುವ ದೇವರು ಭಕ್ತರಿಗೆ ಎಚ್ಚರಿಕೆ ನೀಡುವುದೂ ಉಂಟು. ಸದ್ಯ ನವರಾತ್ರಿ ನಡೆಯುತ್ತಿದೆ. ಈ ಶುಭ ಸಂದರ್ಭದಲ್ಲಿ ತಾಯಿ ಕನಸಿನಲ್ಲಿ ಕಾಣಿಸಿಕೊಂಡ್ರೆ ಶುಭ ಎನ್ನಲಾಗುತ್ತದೆ.
ಕನಸಿನಲ್ಲಿ ದೇವಿ ಕೆಂಪು ಬಟ್ಟೆ ಧರಿಸಿ ಮುಖದಲ್ಲಿ ಮುಗುಳ್ನಗುತ್ತಿದ್ದರೆ, ನಿಮ್ಮ ಜೀವನದಲ್ಲಿ ಒಳ್ಳೆಯ ಘಟನೆ ನಡೆಯಲಿದೆ ಎಂದರ್ಥ. ನಿಮ್ಮ ಜೀವನದಲ್ಲಿ ಶೀಘ್ರವೇ ಸಂತೋಷವು ಬರಲಿದೆ ಎಂಬುದರ ಸಂಕೇತ.
ದೇವಿ ಕನಸಿನಲ್ಲಿ ಸಿಂಹದ ಮೇಲೆ ಸವಾರಿ ಮಾಡುತ್ತಿರುವಂತೆ ಕಂಡರೆ ನಿಮ್ಮ ಅದೃಷ್ಟ ಬದಲಾಗಲಿದೆ. ದುರದೃಷ್ಟದ ದಿನಗಳು ಕೊನೆಗೊಂಡು, ಅದೃಷ್ಟದ ದಿನಗಳು ಪ್ರಾರಂಭವಾಗಲಿವೆ. ಅರ್ಧಕ್ಕೆ ನಿಂತ ಕೆಲಸ ಪೂರ್ಣಗೊಳ್ಳಲಿದೆ.
ದೇವಿ ಕನಸಿನಲ್ಲಿ ಅಳುವುದು ಅಥವಾ ದುಃಖಿಸುತ್ತಿರುವುದು ಕಂಡರೆ ಅಥವಾ ಬಿಳಿ, ಕಪ್ಪು ಬಟ್ಟೆಯಲ್ಲಿ ಕಾಣಿಸಿಕೊಂಡರೆ ಕೆಟ್ಟ ಸಮಯದ ಸಂಕೇತ. ಮುಂದಿನ ದಿನಗಳಲ್ಲಿ ಜಾಗರೂಕರಾಗಿರಿ.