ಮದುವೆ ಸಮಯದಲ್ಲಿ ಹುಡುಗ-ಹುಡುಗಿಗೆ ಸೆಕ್ಸ್ ಶಿಕ್ಷಣವನ್ನು ಅವಶ್ಯವಾಗಿ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗೇ ಲೈಂಗಿಕ ಶಿಕ್ಷಣ ನೀಡುವ ಅನಿವಾರ್ಯತೆಯಿದೆ. ಆದ್ರೆ ಮಕ್ಕಳಿಗೆ ಜೀವನದ ಇತರ ಪಾಠಗಳನ್ನು ಹೇಳುವ ಪಾಲಕರು ಲೈಂಗಿಕ ಜೀವನದ ಬಗ್ಗೆ ಶಿಕ್ಷಣ ನೀಡುವುದಿಲ್ಲ. ಇದು ಮದುವೆ ನಂತ್ರ ಕೆಲವೊಂದು ಸಮಸ್ಯೆಗೆ ಕಾರಣವಾಗುತ್ತದೆ.
ಮೊದಲ ರಾತ್ರಿ ಬಗ್ಗೆ ಹುಡುಗ-ಹುಡುಗಿಯಲ್ಲಿ ಅನೇಕ ತಪ್ಪು ಗ್ರಹಿಕೆಗಳಿವೆ. ಸಿನಿಮಾ ನೋಡಿ ಅಲ್ಲಿ ತೋರಿಸುವುದನ್ನೇ ಸತ್ಯವೆಂದು ನಂಬುವವರಿದ್ದಾರೆ. ಅಂತರ್ಜಾಲ ಹಾಗೂ ಸ್ನೇಹಿತರಿಂದ ಮಾಹಿತಿ ಪಡೆಯುವವರೂ ಇದ್ದಾರೆ. ಮೊದಲ ರಾತ್ರಿ ಸಂಭೋಗ ಅವಶ್ಯ ಎಂದು ಅನೇಕರು ತಿಳಿದುಕೊಂಡಿದ್ದಾರೆ. ಆದ್ರೆ ಇದು ತಪ್ಪು. ಮೊದಲು ಒಬ್ಬರನ್ನೊಬ್ಬರು ಅರಿತುಕೊಳ್ಳಬೇಕಾಗುತ್ತದೆ. ಸೆಕ್ಸ್ ಒಂದು ಕ್ರಿಯೆಯಲ್ಲ. ಭಾವನೆ ಮೇಲೆ ನಿಂತಿರುವುದು. ಸಂಬಂಧದ ಅಡಿಪಾಯಕ್ಕೆ ಇದು ಬಹಳ ಮುಖ್ಯ.
ಲೈಂಗಿಕವಾಗಿ ಹರಡುವ ರೋಗಗಳ ಬಗ್ಗೆ ತಿಳಿದುಕೊಳ್ಳಬೇಕು. ಕುಟುಂಬ ಯೋಜನೆ, ವೈಯಕ್ತಿಕ ನೈರ್ಮಲ್ಯ ಲೈಂಗಿಕ ಶಿಕ್ಷಣದಲ್ಲಿ ಬರುತ್ತದೆ. ಮದುವೆಯಾಗುವ ಮುನ್ನ ಅಥವಾ ಸಂಬಂಧ ಬೆಳೆಸುವ ಮೊದಲು ಇದ್ರ ಬಗ್ಗೆ ತಿಳಿದಿರಬೇಕಾಗುತ್ತದೆ.
ಕೆಲ ಹುಡುಗಿಯರ ಮನಸ್ಸಿನಲ್ಲಿ ಬಾಲ್ಯದಿಂದಲೇ ತಪ್ಪು ಅಭಿಪ್ರಾಯ ತುಂಬಲಾಗುತ್ತದೆ. ಮದುವೆ ನಂತ್ರ ಪತಿ ಇಚ್ಛೆಯಂತೆ ನಡೆದುಕೊಳ್ಳಬೇಕು. ಆತ ಬಯಸಿದಾಗ ಮಾತ್ರ ಸಂಬಂಧ ಬೆಳೆಸಬೇಕು ಹೀಗೆ ಅನೇಕ ವಿಷ್ಯಗಳನ್ನು ಹುಡುಗಿಯರ ತಲೆಗೆ ತುಂಬಲಾಗುತ್ತದೆ. ಇದ್ರ ಬಗ್ಗೆಯೂ ಸರಿಯಾದ ಮಾಹಿತಿಯನ್ನು ಹುಡುಗಿಯರಿಗೆ ಹೇಳಬೇಕಾದ ಅನಿವಾರ್ಯತೆಯಿದೆ.
ಲೈಂಗಿಕ ವಿಚಾರದಲ್ಲಿ ಹೇಗೆ ಸಂಬಂಧವನ್ನು ಬಲಪಡಿಸಬೇಕು ಹಾಗೆ ಕಾಂಡೋಮ್ ಬಳಕೆ ಹೇಗೆ ಎನ್ನುವ ಬಗ್ಗೆಯೂ ಶಿಕ್ಷಣ ಪಡೆಯುವ ಅವಶ್ಯಕತೆಯಿದೆ.