
ತಾಯಿ ಲಕ್ಷ್ಮಿ ವೈಭವ ಹಾಗೂ ಖ್ಯಾತಿಯ ದೇವತೆ. ತಾಯಿ ಲಕ್ಷ್ಮಿಯನ್ನು ಮೆಚ್ಚಿಸಲು ಭಕ್ತರು ಸಾಕಷ್ಟು ಪ್ರಯತ್ನ ಮಾಡ್ತಾರೆ. ಪೂಜೆ, ಆರಾಧನೆ, ವೃತ ಮಾಡ್ತಾರೆ. ಇಷ್ಟಾದ್ರೂ ತಾಯಿ ಲಕ್ಷ್ಮಿ ಅನೇಕರಿಗೆ ಒಲಿಯುವುದಿಲ್ಲ. ಸಂಜೆ ಪ್ರತಿ ದಿನ ಮಾಡುವ ಕೆಲಸದಿಂದ ತಾಯಿಯನ್ನು ಒಲಿಸಿಕೊಳ್ಳಬಹುದು. ಹಣಕ್ಕೆ ಸಂಬಂಧಿಸಿದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಸಂಜೆ ದೇವರ ಮನೆಯಲ್ಲಿ ದೀಪ ಹಚ್ಚಿ ಆರತಿ ಮಾಡಿ. ದೇವರಿಗೆ ಸಿಹಿಯನ್ನು ಅರ್ಪಿಸಿ. ತುಳಸಿ ಗಿಡದ ಕೆಳಗೆ ದೀಪವನ್ನು ಹಚ್ಚಿ. ಸಂಜೆ ವೇಳೆ ಮನೆಯಲ್ಲಿ ಶಾಂತಿ ನೆಲೆಸಿರಲಿ. ಸಂಜೆ ಮನೆಗೆ ಹೋಗುವ ವೇಳೆ ಖಾಲಿ ಕೈನಲ್ಲಿ ಹೋಗಬೇಡಿ. ಏನಾದ್ರೂ ವಸ್ತುವನ್ನು ತೆಗೆದುಕೊಂಡು ಹೋಗಿ.
ಮನೆಯಲ್ಲಿ ಪೂರ್ವಜರ ಫೋಟೋ ಇದ್ದರೆ ಅದರ ಮುಂದೆ ದೀಪ ಹಚ್ಚಬೇಕು. ಲಕ್ಷ್ಮಿ ಕೋಪಗೊಳ್ಳುವ ಕೆಲಸವನ್ನು ಎಂದಿಗೂ ಮಾಡಬೇಡಿ. ಯಾವಾಗಲೂ ಜಗಳ ಮಾಡುವ, ಮುನಿಸಿಕೊಂಡಿರುವ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ. ಸಂಜೆ ಹಾಗೂ ಬೆಳಿಗ್ಗೆ ಲಕ್ಷ್ಮಿ ಪೂಜೆ ಮಾಡದ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿರುತ್ತದೆ. ಸೂರ್ಯೋದಯದ ನಂತ್ರ ನಿದ್ರೆ ಮಾಡುವವರ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ.