ಪಿಜ್ಜಾ ಅಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಆದರ ಎಂದಾದರೂ ಕುಲ್ಹಾಡ್ ಪಿಜ್ಜಾ ಬಗ್ಗೆ ಕೇಳಿದ್ದೀರೇ..? ಇಂತಹದ್ದೊಂದು ಪಿಜ್ಜಾ ಇದೆಯಾ..? ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ.. ಇದಕ್ಕೆ ಉತ್ತರ ಹೌದು. ಅದರಲ್ಲೂ ವಿಶೇಷವಾಗಿ ಭಾರತದಲ್ಲಿಯೇ ಈ ರೀತಿಯ ಪಿಜ್ಜಾ ಲಭ್ಯವಿದೆ.
ಗುಜರಾತ್ನ ಸೂರತ್ನಲ್ಲಿರುವ ಅಂಗಡಿಯೊಂದು ಇಂತಹದ್ದೊಂದು ವಿಶೇಷ ಪಿಜ್ಜಾವನ್ನು ಆವಿಷ್ಕರಣೆ ಮಾಡುವ ಮೂಲಕ ಸುದ್ದಿಯಲ್ಲಿದೆ. ಅಂದರೆ ಇಲ್ಲಿ ನಿಮಗೆ ಮಣ್ಣಿನ ಸಣ್ಣ ಪಾತ್ರೆಯಲ್ಲಿ ಪಿಜ್ಜಾವನ್ನು ನೀಡಲಾಗುತ್ತದೆ. ಮಣ್ಣಿನ ಅತೀ ಚಿಕ್ಕ ಪಾತ್ರೆಯನ್ನು ಕುಲ್ಹಾಡ್ ಎಂದು ಕರೆಯಲಾಗುತ್ತದೆ. ಹೀಗಾಗಿಯೇ ಈ ಪಿಜ್ಜಾ ಕುಲ್ಹಾಡ್ ಪಿಜ್ಜಾ ಎಂದು ಹೆಸರು ಪಡೆದಿದೆ.
ಆಮ್ಚಿ ಮುಂಬೈ ಎಂಬ ಯೂಟ್ಯೂಬ್ ಪೇಜ್ನಲ್ಲಿ ಈ ಪಿಜ್ಜಾ ಬಗ್ಗೆ ಮಾರ್ಚ್ ತಿಂಗಳಲ್ಲಿಯೇ ಮಾಹಿತಿ ನೀಡಿಲಾಗಿದೆ. ಆದರೆ ಈ ವಿಡಿಯೋ ಇದೀಗ ವೈರಲ್ ಆಗಿದ್ದು 23 ಲಕ್ಷ ವೀವ್ಸ್ ಸಂಪಾದಿಸಿದೆ.