
ಆದರೆ ಈಗ ಥೇಟ್ ಇದೇ ರೀತಿಯ ಶಕ ಲಕ ಬೂಮ್ ಬೂಮ್ ಪೆನ್ ಮಾರುಕಟ್ಟೆಯಲ್ಲಿ ಹೊರಬಂದಿದೆ. ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ “3 ಡಿ ಪ್ರಿಂಟರ್ ಪೆನ್ನುಗಳು” ಎಂದು ಟೈಪ್ ಮಾಡುವ ಮೂಲಕ ನೀವು ಈ ಪೆನ್ಸಿಲ್‌ಗಾಗಿ ಹುಡುಕಬಹುದು. ಆದರೆ ಅದು ಪೆನ್ಸಿಲ್ ಅಲ್ಲ, ಬದಲಿಗೆ ಪೆನ್ ಆಗಿದೆ.
ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಂತಹ ವೆಬ್‌ಸೈಟ್‌ಗಳಲ್ಲಿ ಈ ಪೆನ್ನು 700 ರಿಂದ 2,500 ರೂ.ವರೆಗೆ ಲಭ್ಯವಿದೆ. ಮೊದಲು ಪೆನ್ನನ್ನು ವಿದ್ಯುತ್‌ಗೆ ಸಂಪರ್ಕಪಡಿಸಿ ಬಿಸಿ ಮಾಡಬೇಕು. ನಂತರ ನೀವು ಬಟನ್ ಒತ್ತುವ ಮೂಲಕ ನೀವು ಇಷ್ಟಪಡುವ ಯಾವುದೇ ವಿನ್ಯಾಸವನ್ನು ರಚಿಸಬಹುದು. ಇದು ಏನನ್ನು ಬೇಕಾದರೂ ರಚಿಸಬಲ್ಲುದು. ಈ ಪೆನ್‌ಗೆ ಜನರು ಮೂಕ ವಿಸ್ಮಿತರಾಗಿದ್ದಾರೆ.