ಬಾಲ್ಯದ ಜೀವನವನ್ನು ಎಲ್ಲರೂ ಇಷ್ಟಪಡ್ತಾರೆ. ಶಾಲೆಯ ನೆನಪುಗಳನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಮತ್ತೆ ಆ ಶಾಲಾ ದಿನಗಳು ಬರಲಿ ಎಂದು ಎಲ್ಲರೂ ಬಯಸ್ತಾರೆ. ಶಾಲಾ ದಿನಗಳಲ್ಲಿ ಎಲ್ಲರೂ ಶಿಕ್ಷೆಗೊಳಗಾಗಿರ್ತಾರೆ.
ಶಾಲೆಯಲ್ಲಿ ಶಿಕ್ಷಕರು ಸಾಮಾನ್ಯವಾಗಿ ನೀಡುವ ಶಿಕ್ಷೆ ಬಸ್ಕಿ. ಎರಡೂ ಕಿವಿಗಳನ್ನು ಹಿಡಿದುಕೊಂಡು ಕುಳಿತು, ಎದ್ದು ಮಾಡುವ ಬಸ್ಕಿ ಶಿಕ್ಷೆಯನ್ನು ಎಲ್ಲರಿಗೂ ನೀಡಲಾಗಿರುತ್ತದೆ. ಮಕ್ಕಳಿಗೆ ಮಾತ್ರವಲ್ಲ ಅನೇಕ ಬಾರಿ ದೊಡ್ಡವರೂ ಈ ಶಿಕ್ಷೆ ಅನುಭವಿಸಿರುತ್ತಾರೆ.
ಈ ಶಿಕ್ಷೆಯ ಹಿಂದೆ ವೈಜ್ಞಾನಿಕ ಕಾರಣವಿದೆ. ಇದು ಗಮನ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ. ಮೆದುಳಿನ ಅನೇಕ ಭಾಗಗಳು ಸಕ್ರಿಯಗೊಳ್ಳುತ್ತವೆ. ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಕಡಿಮೆ ಮಾಡಲು ಇದು ನೆರವಾಗುತ್ತದೆ. ಸಂಶೋಧನೆಯೊಂದರಲ್ಲಿ ಕಿವಿಯನ್ನು 1 ನಿಮಿಷ ಹಿಡಿದಿಟ್ಟುಕೊಳ್ಳುವ ಮೂಲಕ, ಬಸ್ಕಿ ತೆಗೆದ್ರೆ ಆಲ್ಫಾ ತರಂಗಗಳ ಚಟುವಟಿಕೆ ಹೆಚ್ಚಾಗುತ್ತದೆ. ಕಿವಿಯ ಹಾಲೆಗಳನ್ನು ಒತ್ತಲಾಗುತ್ತದೆ. ಇದು ಮೆದುಳಿನ ಬಲ ಮತ್ತು ಎಡ ಭಾಗಗಳನ್ನು ಚುರುಕುಗೊಳಿಸುತ್ತದೆ.