alex Certify ಸೋರುತಿಹುದು ಶಾಲೆ ಮಾಳಿಗೆ; ಪವರ್‌ ಸ್ಟಾರ್ ಪುನೀತ್ ರಾಜ್ ಕುಮಾರ್ ಗೂ ಆ ಶಾಲೆಗೂ ಇದೆ ‘ರಾಷ್ಟ್ರ ಪ್ರಶಸ್ತಿ’ ನಂಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋರುತಿಹುದು ಶಾಲೆ ಮಾಳಿಗೆ; ಪವರ್‌ ಸ್ಟಾರ್ ಪುನೀತ್ ರಾಜ್ ಕುಮಾರ್ ಗೂ ಆ ಶಾಲೆಗೂ ಇದೆ ‘ರಾಷ್ಟ್ರ ಪ್ರಶಸ್ತಿ’ ನಂಟು

ಕರುನಾಡ ಮಲೆನಾಡು ಭಾಗದಲ್ಲಿ ಸಾಕಷ್ಟು ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಜೋರು ಮಳೆಯಿಂದ ಮನೆಗಳು, ಶಾಲಾ ಕಟ್ಟಡಗಳು ಶಿಥಿಲಗೊಂಡಿವೆ. ಇಂತಹ ಶಾಲೆಗಳ ಪೈಕಿ ಭಾರತೀಯ ಸಿನಿಮಾ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದ ಸರ್ಕಾರಿ ಶಾಲೆಯೂ ಸೇರಿದೆ.

ರಾಜ್ಯದ ಅತಿ ಎತ್ತರದ ಪ್ರದೇಶವಾದ ಮುಳ್ಳಯ್ಯನಗಿರಿಯ ತಪ್ಪಲಿನಲ್ಲಿರುವ ಅತ್ತಿಗುಂಡಿ ಸರ್ಕಾರಿ ಶಾಲೆಯ ಮೇಲ್ಛಾವಣಿಯು ತೀವ್ರವಾಗಿ ಹಾನಿಗೊಳಗಾಗಿದೆ. ಅದನ್ನು ಉಳಿಸಿಕೊಳ್ಳಲು ತಾತ್ಕಾಲಿಕವಾಗಿ ಟಾರ್ಪಲ್ ಹಾಕಲಾಗಿದೆ.

ಈ ಶಾಲೆಯು ಕೇವಲ ಯಾವುದೇ ಶಿಕ್ಷಣ ಸಂಸ್ಥೆಯಲ್ಲ; ಖ್ಯಾತ ನಟ ದಿವಂಗತ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಆಳವಾದ ಸಂಬಂಧ ಹೊಂದಿದೆ. ಪುನೀತ್ ಇಲ್ಲಿ ಬಾಲ ನಟನಾಗಿ ತಮ್ಮ ಸಿನಿಮಾ ಪ್ರಯಾಣವನ್ನು ಪ್ರಾರಂಭಿಸಿದರು. ಅವರ ಚಲನಚಿತ್ರ “ಬೆಟ್ಟದ ಹೂವು” ಅವರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ತಂದುಕೊಟ್ಟಿತು. ಹಾಗಾಗಿ ಈ ಶಾಲೆಯನ್ನು ಭಾರತೀಯ ಚಲನಚಿತ್ರೋದ್ಯಮದಲ್ಲಿ ಮಹತ್ವದ ತಾಣವೆಂದು ಗುರುತಿಸಲಾಗಿದೆ.

ಪಶ್ಚಿಮಘಟ್ಟದಲ್ಲಿ ಒಂದೂವರೆ ತಿಂಗಳಿನಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಅತ್ತಿಗುಂಡಿ ಗ್ರಾಮದ ಶಾಲೆ ಸಂಕಷ್ಟದಲ್ಲಿದೆ. 100 ಮನೆಗಳಲ್ಲಿ ಸುಮಾರು 500 ನಿವಾಸಿಗಳು ವಾಸಿಸುವ ಈ ಸಣ್ಣ ಹಳ್ಳಿಯ ಈ ಶಾಲೆಯಲ್ಲಿ ಪುನೀತ್ ಅವರ ಅದ್ಭುತ ಚಲನಚಿತ್ರವಾದ “ಬೆಟ್ಟದ ಹೂ” ಚಿತ್ರೀಕರಣವಾಗಿತ್ತು.

ಪ್ರಸ್ತುತ ಶಾಲೆಯ ಮೇಲ್ಛಾವಣಿಯನ್ನು ಸೋರಿಕೆಯಿಂದ ರಕ್ಷಿಸಲು ಟಾರ್ಪಲ್ ನಿಂದ ಮುಚ್ಚಲಾಗಿದೆ. ಈ ಶಾಲೆಯಲ್ಲಿ 1 ರಿಂದ 5 ನೇ ತರಗತಿಯವರೆಗೆ ಹನ್ನೆರಡು ಮಕ್ಕಳಿದ್ದಾರಷ್ಟೆ. ಹೆಚ್ಚಾಗಿ ಅವರೆಲ್ಲರೂ ಕಾರ್ಮಿಕ ಕುಟುಂಬಗಳ ಮಕ್ಕಳು. ಗಮನಾರ್ಹವಾಗಿ ಈ ವಿದ್ಯಾರ್ಥಿಗಳಲ್ಲಿ ಕೆಲವರು ಪುನೀತ್ ಅವರ ಹಿಂದಿನ ಸಹಪಾಠಿಗಳ (ಚಿತ್ರದಲ್ಲಿ) ಮಕ್ಕಳು, ಮೊಮ್ಮಕ್ಕಳು.

ಕಡಿಮೆ ದಾಖಲಾತಿಯಿಂದಾಗಿ ಎರಡು ವರ್ಷಗಳಿಂದ ಶಾಲೆಯನ್ನು ಮುಚ್ಚಲಾಗಿತ್ತು, ಆದರೆ ಸಮುದಾಯದ ಪ್ರಯತ್ನದಿಂದ ಪುನರುಜ್ಜೀವನಗೊಂಡಿದ್ದು ಈಗ ಪುನೀತ್ ಅವರ ಭಾವಚಿತ್ರವನ್ನು ಗೌರವಾರ್ಥವಾಗಿ ಪ್ರದರ್ಶಿಸಲಾಗಿದೆ.

ಭಾರೀ ಮಳೆಯಿಂದಾಗಿ ಮಲೆನಾಡಿನಲ್ಲಿ 409 ಅಂಗನವಾಡಿ ಕೇಂದ್ರಗಳು, 204 ಸರ್ಕಾರಿ ಶಾಲಾ ಕಟ್ಟಡಗಳು ಮತ್ತು 24 ಕಾಲೇಜು ಕಟ್ಟಡಗಳ ಮೇಲೆ ವ್ಯಾಪಕ ಹಾನಿಯಾಗಿದೆ. ಬಿಕ್ಕಟ್ಟಿಗೆ ಸ್ಪಂದಿಸಿ ಈ ಐತಿಹಾಸಿಕ ಶಾಲೆಯನ್ನು ಉಳಿಸಲು ಸರ್ಕಾರ ಮತ್ತು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಒತ್ತಾಯಿಸುತ್ತಿದ್ದಾರೆ. ಮೇಲ್ಛಾವಣಿ ಮತ್ತು ಶೌಚಾಲಯಗಳಿಗೆ ಅಗತ್ಯವಿರುವ ರಚನಾತ್ಮಕ ರಿಪೇರಿ ಮಾತ್ರವಲ್ಲದೆ ಶಾಲೆಯ ಭಾವನಾತ್ಮಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಮನವಿಯಲ್ಲಿ ತಿಳಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...