alex Certify ಶಾಲೆ ಬಿಟ್ಟವಳು ಇಂದು ಕೋಟ್ಯಧೀಶ್ವರೆ: ಎಲ್ಲರಿಗೂ ಮಾದರಿ ಈ ಮಹಿಳೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲೆ ಬಿಟ್ಟವಳು ಇಂದು ಕೋಟ್ಯಧೀಶ್ವರೆ: ಎಲ್ಲರಿಗೂ ಮಾದರಿ ಈ ಮಹಿಳೆ…..!

ಉತ್ತಮ ಜೀವನ ನಡೆಸಲು ಶಿಕ್ಷಣ ಅಗತ್ಯ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಆದರೆ ಎಲ್ಲಾ ಸಂದರ್ಭಗಳಲ್ಲಿಯೂ ಈ ಮಾತು ಅನ್ವಯ ಆಗುವುದಿಲ್ಲ ಎನ್ನುವುದಕ್ಕೆ ಉದಾಹರಣೆ ಇಲ್ಲೊಂದು ಘಟನೆ.

16 ನೇ ವಯಸ್ಸಿನಲ್ಲಿ ಶಾಲೆಯಿಂದ ಹೊರಗುಳಿದ ಮಹಿಳೆಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮ ಜೀವನಶೈಲಿಯನ್ನು ನೀಡಿರುವುದೂ ಅಲ್ಲದೇ, ನಾಲ್ಕು ಮನೆಗಳನ್ನು ಕಟ್ಟಿಸಿದ್ದಾಳೆ. ಇಷ್ಟೇ ಮಾಡಿದವರು ಹಲವರು ಇರಬಹುದು. ಆದರೆ ಈ ಮಹಿಳೆ ಇತರರಿಗೆ ಉದ್ಯೋಗ ನೀಡುತ್ತಿದ್ದು ಎಲ್ಲರ ಹುಬ್ಬೇರಿಸಿದ್ದಾಳೆ.

ರಾಚೆಲ್ ಒಲಿಂಗ್ಟನ್ ತನ್ನ 18 ನೇ ವಯಸ್ಸಿನಲ್ಲಿಯೇ ಮೊದಲ ಬಾರಿಗೆ ದುಡಿಮೆಯಿಂದ ಬೃಹತ್​ ಮನೆ ನಿರ್ಮಿಸಿರುವುದೂ ಅಲ್ಲದೇ, ಈಗ ಮೂವರು ಮಕ್ಕಳ ತಾಯಿಯಾಗಿರುವ ಈಕೆ ನಾಲ್ಕು ಸುಂದರವಾದ ಮನೆಯ ಮಾಲೀಕಳಾಗಿದ್ದಾಳೆ. ಸದ್ಯ ರಾಚೆಲ್ ಮತ್ತು ಆಕೆಯ ಕುಟುಂಬವು ಪ್ರಸ್ತುತ ವಾಸಿಸುತ್ತಿರುವ ಮನೆ ನಾಲ್ಕು ಬೆಡ್​ರೂಂ ಆಗಿದ್ದು, ಇದಕ್ಕೆ ಸುಮಾರು £ 475,000 (ಸುಮಾರು 4.61 ಕೋಟಿ ರೂಪಾಯಿಗಳು) ವೆಚ್ಚ ಮಾಡಲಾಗಿದೆ.

ಅಷ್ಟಕ್ಕೂ ಇಷ್ಟೊಂದು ದೊಡ್ಡಮಟ್ಟದಲ್ಲಿ ಬೆಳೆಯಲು ಕಾರಣ ಏನೆಂದರೆ ರಾಚೆಲ್​ ಕಷ್ಟಪಟ್ಟು ಅಲ್ಲಿಲ್ಲಿ ಕೆಲಸ ಕಾರ್ಯಗಳನ್ನು ಮಾಡಿ ಅದೇ ಹಣದಿಂದ ಎಸ್ಟೇಟ್ ಏಜೆನ್ಸಿ ಸ್ಥಾಪಿಸಿದಳು. ಹಗಲೂ ರಾತ್ರಿ ಇಲ್ಲಿ ದುಡಿದು ಅನೇಕ ಮಂದಿಗೆ ಉದ್ಯೋಗವನ್ನೂ ಕೊಟ್ಟಳು. ಅಲ್ಲಿಂದ ಆಕೆಯ ದಿಕ್ಕೇ ಬದಲಾಯಿತು. ಕಷ್ಟಪಟ್ಟು ದುಡಿದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಈಕೆಯೇ ಉದಾಹರಣೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...