ರೈತರ ಆದಾಯವನ್ನು ಹೆಚ್ಚಿಸಲು ಮತ್ತು ತೋಟಗಾರಿಕಾ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಸರ್ಕಾರವು ರಾಷ್ಟ್ರೀಯ ತೋಟಗಾರಿಕೆ ಮಂಡಳಿ (NHB) ಮೂಲಕ ಹಲವಾರು ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ, ರೈತರು ಶೇಡ್ ನೆಟ್, ಹಸಿರು ಮನೆ, ಪಾಲಿಹೌಸ್ ಕೃಷಿ, ಶೀತಲೀಕರಣ ಘಟಕ ಮತ್ತು ಅಣಬೆ ಕೃಷಿ ಸ್ಥಾಪನೆಗೆ ಶೇಕಡಾ 50 ರವರೆಗೆ ಸಬ್ಸಿಡಿ ಪಡೆಯಬಹುದು.
ಯಾವೆಲ್ಲಾ ಸೌಲಭ್ಯಗಳು ಲಭ್ಯವಿದೆ ?
- ಶೇಡ್ ನೆಟ್, ಹಸಿರು ಮನೆ ಮತ್ತು ಪಾಲಿಹೌಸ್ ಕೃಷಿ: ಈ ರೀತಿಯ ಕೃಷಿಗೆ ಸರ್ಕಾರವು ಶೇಕಡಾ 50 ರವರೆಗೆ ಸಬ್ಸಿಡಿ ನೀಡುತ್ತಿದೆ.
- ತೆರೆದ ಜಮೀನಿನಲ್ಲಿ ಹಣ್ಣಿನ ಕೃಷಿ: ನೆಲ್ಲಿಕಾಯಿ, ಮಾವು, ಪೇರಲದಂತಹ ಹಣ್ಣುಗಳನ್ನು ಬೆಳೆಯುವ ರೈತರಿಗೆ ಶೇಕಡಾ 40 ರವರೆಗೆ ಸಬ್ಸಿಡಿ ನೀಡಲಾಗುತ್ತಿದೆ.
- ಶೀತಲೀಕರಣ ಘಟಕ ಮತ್ತು ಅಣಬೆ ಕೃಷಿ: ಶೀತಲೀಕರಣ ಘಟಕ ಸ್ಥಾಪನೆಗೆ ಶೇಕಡಾ 30 ರಿಂದ 50 ರವರೆಗೆ ಮತ್ತು ಅಣಬೆ ಕೃಷಿಗೆ ಶೇಕಡಾ 40 ರವರೆಗೆ ಸಬ್ಸಿಡಿ ನೀಡಲಾಗುತ್ತಿದೆ.
- ಕೃಷಿ ಸಂಬಂಧಿತ ಉದ್ಯಮಿಗಳು, ಸ್ಟಾರ್ಟ್‌ಅಪ್‌ಗಳು ಮತ್ತು ರೈತರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ.
- ಹಣ್ಣು ಮತ್ತು ಹೂವುಗಳ ಕೃಷಿಯ ಜೊತೆಗೆ ಸಂಬಾರ ಪದಾರ್ಥಗಳು, ಆರೊಮ್ಯಾಟಿಕ್ ಮತ್ತು ಔಷಧೀಯ ಸಸ್ಯಗಳ ಕೃಷಿಗೂ ಸಬ್ಸಿಡಿ ನೀಡಲಾಗುತ್ತಿದೆ.
ಅರ್ಜಿ ಸಲ್ಲಿಸುವುದು ಹೇಗೆ ?
- ರೈತರು ರಾಷ್ಟ್ರೀಯ ತೋಟಗಾರಿಕೆ ಮಂಡಳಿಯ ಅಧಿಕೃತ ವೆಬ್‌ಸೈಟ್ www.nhb.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
- ಯೋಜನೆಯ ವೆಚ್ಚಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಬೇಕಾಗುವ ದಾಖಲೆಗಳು
- ಪ್ಯಾನ್ ಕಾರ್ಡ್
- ಮತದಾರರ ಗುರುತಿನ ಚೀಟಿ
- ಆಧಾರ್ ಕಾರ್ಡ್
- ಪಾಲುದಾರಿಕೆ ಸಂಸ್ಥೆಯ ನೋಂದಣಿ (ಅನ್ವಯಿಸಿದರೆ)
- ಕಂಪನಿ, ಸೊಸೈಟಿ, ಟ್ರಸ್ಟ್ ಇತ್ಯಾದಿಗಳ ನೋಂದಣಿ (ಅನ್ವಯಿಸಿದರೆ)
ಹೆಚ್ಚಿನ ಮಾಹಿತಿ:
- ಹೆಚ್ಚಿನ ಮಾಹಿತಿಗಾಗಿ, ನಿಮ್ಮ ಹತ್ತಿರದ ತೋಟಗಾರಿಕೆ ಇಲಾಖೆ ಕಚೇರಿಯನ್ನು ಸಂಪರ್ಕಿಸಿ.
- ಅಥವಾ, ರಾಷ್ಟ್ರೀಯ ತೋಟಗಾರಿಕೆ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಈ ಯೋಜನೆಯು ರೈತರಿಗೆ ತೋಟಗಾರಿಕೆ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಮತ್ತು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ.