ಇಂದಿನ ದಿನಗಳಲ್ಲಿ ಆರೋಗ್ಯಕರ ಜೀವನಶೈಲಿಯ ಅರಿವು ಎಲ್ಲೆಡೆ ಸದ್ದು ಮಾಡುತ್ತಿದೆ. ಇದೇ ಟ್ರೆಂಡ್ ಅನ್ನು ಉಪಯೋಗಿಸಿಕೊಂಡಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್.ಬಿ.ಐ.) ವಿಶೇಷ ರೀತಿಯ ಕ್ರೆಡಿಟ್ ಕಾರ್ಡ್ ಆಫರ್ ಒಂದನ್ನು ತಂದಿದೆ.
ಆರೋಗ್ಯ ಹಾಗೂ ಫಿಟ್ನೆಸ್‌ಗೆ ಪ್ರೇರೇಪಣೆ ನೀಡುವ ಥೀಂನಲ್ಲಿ, ’ಪಲ್ಸ್’ ಹೆಸರಿನ ಕ್ರೆಡಿಟ್ ಕಾರ್ಡ್ ಪರಿಚಯಿಸಿರುವ ಎಸ್.ಬಿ.ಐ., ವೀಸಾದ ಸಿಗ್ನೇಚರ್ ವ್ಯವಸ್ಥೆಯ ಹಾದಿಯಲ್ಲಿ ಕಾಲಿಟ್ಟಿದೆ. 1,499 ರೂ.ಗೆ ವಾರ್ಷಿಕ ಚಂದಾದಾರಿಕೆಯೊಂದಿಗೆ 4,999 ರೂ. ಮೌಲ್ಯದ ನಾಯ್ಸ್ ಕಲರ್‌ಫಿಟ್ ಪಲ್ಸ್ ಸ್ಮಾರ್ಟ್‌ವಾಚ್ ಅನ್ನು ಉಚಿತವಾಗಿ ನೀಡುತ್ತಿದೆ ಎಸ್.ಬಿ.ಐ..
ಸದಸ್ಯತ್ವ ಶುಲ್ಕ ಪಾವತಿ ಮಾಡುವ ವೇಳೆ ಈ ವೆಲ್‌ಕಂ ಗಿಫ್ಟ್ ಅನ್ನು ಎಸ್.ಬಿ.ಐ. ನೀಡುತ್ತಿದೆ. ಕಾರ್ಡ್‌ದಾರರು ವಾರ್ಷಿಕ ಎರಡು ಲಕ್ಷ ರೂ.ಗಿಂತ ಹೆಚ್ಚಾಗಿ ಖರ್ಚು ಮಾಡಿದರೆ ವಾರ್ಷಿಕ ಚಂದಾದಾರಿಕೆಯ ಶುಲ್ಕ ಮನ್ನಾ ಮಾಡಲಾಗುತ್ತದೆ.
ಬಹಿರಂಗ ನಮಾಜ್ ವಿರೋಧಿಸಿದ್ದ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ ಕರೆ
ಈ ಕಾರ್ಡ್‌ನೊಂದಿಗೆ ಅನೇಕ ರೀತಿಯ ವೈದ್ಯಕೀಯ ಪ್ರಯೋಜನಗಳನ್ನೂ ನೀಡಲಾಗುತ್ತಿದೆ. ಜೊತೆಗೆ ಹಾಲಿಡೇ ಹಾಗೂ ಇಂಧನ ವೆಚ್ಚಗಳ ಮೇಲೂ ಪ್ರಯೋಜನಗಳನ್ನು ನೀಡಲಾಗುತ್ತದೆ.
ಕ್ರೆಡಿಟ್ ಕಾರ್ಡ್ ಮೂಲಕ ಮಾಡಲಾಗುವ ಮಾಸಿಕ ಕಂತುಗಳ ಪಾವತಿ ಮೇಲೆ 99ರೂ + ತೆರಿಗೆಗಳ ಶುಲ್ಕ ವಿಧಿಸುವುದಾಗಿ ಎಸ್.ಬಿ.ಐ. ಅದಾಗಲೇ ತಿಳಿಸಿದೆ. ಆರ್.ಬಿ.ಐ. ದತ್ತಾಂಶದ ಪ್ರಕಾರ, 1.276 ಕೋಟಿ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸಿರುವ ಎಸ್.ಬಿ.ಐ.ಗೆ ದೇಶದ ಒಟ್ಟಾರೆ ಕ್ರೆಡಿಟ್ ಕಾರ್ಡ್‌ಗಳ ಪೈಕಿ 19%ರಷ್ಟು ಎಸ್.ಬಿ.ಐ.ನದ್ದಾಗಿದೆ.
ಎಸ್.ಬಿ.ಐ. ಜಾಲತಾಣಕ್ಕೆ ಭೇಟಿ ನೀಡಿ ಸರಳ ಕ್ರಿಯೆಗಳನ್ನು ಪೂರೈಸುವ ಮೂಲಕ ನೀವೂ ಸಹ ಪಲ್ಸ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು.