alex Certify ಬೆರಗುಗೊಳಿಸುತ್ತೆ 4‌,045 ದೀಪಗಳ ಕಾಳಿ ದೇವಿಯ ಮರಳು ಶಿಲ್ಪ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗುಗೊಳಿಸುತ್ತೆ 4‌,045 ದೀಪಗಳ ಕಾಳಿ ದೇವಿಯ ಮರಳು ಶಿಲ್ಪ….!

ಖ್ಯಾತ ಮರಳು ಕಲಾವಿದ, ಪದ್ಮಶ್ರೀ ಪುರಸ್ಕೃತ ಸುದರ್ಶನ್ ಪಟ್ನಾಯಕ್ ಮತ್ತೊಮ್ಮೆ ತಮ್ಮ ಸುಂದರವಾದ ಮರಳು ಕಲಾ ರಚನೆಯೊಂದಿಗೆ ಗಮನ ಸೆಳೆಯುತ್ತಿದ್ದಾರೆ.

ಈ ಬಾರಿ ಒಡಿಶಾದ ಪುರಿ ಬೀಚ್‌ನಲ್ಲಿ 4,045 ದೀಪಗಳು ಮತ್ತು 6 ಟನ್ ಮರಳನ್ನು ಬಳಸಿ ಕಾಳಿ ದೇವಿಯ 5 ಅಡಿ ಎತ್ತರದ ಮರಳಿನ ಶಿಲ್ಪವನ್ನು ರಚಿಸಿದ್ದಾರೆ.

ಅವರೊಂದಿಗೆ ಮರಳು ಕಲಾ ಸಂಸ್ಥೆಯ ವಿದ್ಯಾರ್ಥಿಗಳು ಕೈಜೋಡಿಸಿದ್ದರಿಂದ 5 ಗಂಟೆಯೊಳಗೆ ಈ ಮರಳು ಶಿಲ್ಪ ರಚಿಸಲಾಗಿದೆ. ಮರಳು ಕಲೆಯು ಕಾಳಿ ದೇವಿಯ ಮುಖವನ್ನು ಹೊಂದಿದೆ, ಅದರ ಕೆಳಗೆ “ಎಲ್ಲಾ ನಕಾರಾತ್ಮಕತೆ ಸುಡೋಣ” ಎಂಬ ಸಂದೇಶವನ್ನು ಬರೆಯಲಾಗಿದೆ.

ಮರಳು ಕಲೆಯ ಚಿತ್ರವನ್ನು ಪಟ್ನಾಯಕ್ ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. “ಈ ದೀಪಾವಳಿಯಲ್ಲಿ ನಾನು ನಮ್ಮ ಪರಿಸರವನ್ನು ಸ್ವಚ್ಛವಾಗಿಡಲು ಮತ್ತು ಮಾಲಿನ್ಯ ಮುಕ್ತ ದೀಪಾವಳಿಗೆ ಜನರಲ್ಲಿ ಮನವಿ ಮಾಡಲು ಬಯಸುತ್ತೇನೆ” ಎಂದು ಅವರು ಶೀರ್ಷಿಕೆ ನೀಡಿದ್ದಾರೆ.

ಇಲ್ಲಿಯವರೆಗೆ ಸುದರ್ಶನ್ ಪಟ್ನಾಯಕ್ ಪ್ರಪಂಚದಾದ್ಯಂತ 60 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಮರಳು ಕಲಾ ಚಾಂಪಿಯನ್‌ಶಿಪ್ ಮತ್ತು ಉತ್ಸವಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಗೆದ್ದಿದ್ದಾರೆ. ಸುದರ್ಶನ್ ಯಾವಾಗಲೂ ತಮ್ಮ ಮರಳು ಕಲೆಯ ಮೂಲಕ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಾರೆ. ಅವರ ಕಲೆಗಳನ್ನು ಯುಎಸ್ ಪರಿಸರ ಮತ್ತು ಡಬ್ಲ್ಯು ಎಚ್ ಒ ಪ್ರಶಂಸಿಸಿವೆ.

ಇದಕ್ಕೂ ಮೊದಲು ಪಟ್ನಾಯಕ್ ಅವರು ಒಡಿಶಾದ ಪುರಿ ಕಡಲತೀರದಲ್ಲಿ 1,213 ಮಣ್ಣಿನ ಟೀ ಕಪ್‌ಗಳನ್ನು ಬಳಸಿ ಐದು ಅಡಿ ಮರಳಿನ ಶಿಲ್ಪವನ್ನು ರಚಿಸಿ ಪ್ರಧಾನಿ ನರೇಂದ್ರ ಮೋದಿ ಅವರ 72 ನೇ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...