alex Certify ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 500 ಬೈಕ್‌ ಮಾರ್ಪಾಡು….! ಇಲ್ಲಿವೆ ಅದರ ಹೊಸ ವೈಶಿಷ್ಟ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 500 ಬೈಕ್‌ ಮಾರ್ಪಾಡು….! ಇಲ್ಲಿವೆ ಅದರ ಹೊಸ ವೈಶಿಷ್ಟ್ಯತೆ

ರಾಯಲ್‌ ಎನ್‌ಫೀಲ್ಡ್‌ ಎಂದರೆ ಎಲ್ಲ ಬೈಕ್‌ ಪ್ರಿಯರ್‌ ಕನಸು. ಈಗಾಗಲೇ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಹೊಂದಿದವರಿಗೆ ಇದೇ ಕಂಪನಿಯ ಹೊಸ ಬೈಕ್‌ಗಳ ಮೇಲೆ ಆಸೆ ಇರುತ್ತದೆ. ಬೇರೆ ಯಾವುದೇ ಬೈಕ್‌ ಇಟ್ಟುಕೊಂಡವರಿಗೆ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ತೆಗೆದುಕೊಳ್ಳಬೇಕು ಎಂಬ ಕನಸಿರುತ್ತದೆ. ಹೀಗೆ, ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಇಟ್ಟುಕೊಂಡವರಿಗೆ ಹೊಸ ಮಾದರಿಯ ರಾಯಲ್‌ ಎನ್‌ಫೀಲ್ಡ್‌ ಹಾಗೂ ಬೇರೆ ಬೈಕ್‌ ಇಟ್ಟುಕೊಂಡು ’ರಾಯಲ್‌’ ಕನಸು ಕಾಣುತ್ತಿರುವವರಿಗೆಂದೇ ನ್ಯೂ ಮೋಟಾರ್‌ಸೈಕಲ್ಸ್‌ ಎಂಬ ಕಂಪನಿಯು ಕ್ಲಾಸಿಕ್‌ 500 ಬೈಕ್‌ಅನ್ನು ಮಾರ್ಪಡಿಸಿದೆ.

’ಕ್ವೀನ್‌’ ಎಂದೇ ಖ್ಯಾತಿಯಾಗಿರುವ ರಾಯಲ್‌ ಎನ್‌ಫೀಲ್ಡ್‌ ಕಂಪನಿಯ ಕ್ಲಾಸಿಕ್‌ 500 ಬೈಕ್‌ ಈಗ ಹೊಸ ವಿನ್ಯಾಸದಲ್ಲಿ ಅವತರಿಸಿದೆ. ನ್ಯೂ ಮೋಟರ್‌ಸೈಕಲ್ಸ್‌ ಕಂಪನಿಯು ರಾಯಲ್‌ ಎನ್‌ಫೀಲ್ಡ್‌ನ ಹೊಸ ಬೈಕ್‌ ವಿನ್ಯಾಸ ಮಾಡಿದ್ದು ಅತ್ಯಾಕರ್ಷಕವಾಗಿದೆ. ಮಾರ್ಪಡಿಸಲಾದ ಬೈಕ್‌ ಎಲ್‌ಇಡಿ ಹೆಡ್‌ಲ್ಯಾಂಪ್‌ ಹೊಂದಿದೆ. ಅಲ್ಲದೆ, ಅಗಲವಾದ ಹ್ಯಾಂಡಲ್‌ಬಾರ್‌, 23 ಇಂಚಿನ ಫ್ರಂಟ್‌ ವ್ಹೀಲ್‌, ಗೋಲ್ಡನ್‌ ಮೆಟಲ್‌, ಕಪ್ಪು ಬಣ್ಣದ ಫಿನಿಶಿಂಗ್‌ ಸೇರಿ ಹಲವು ಮಾರ್ಪಾಡುಗಳು ಬೈಕ್‌ ಪ್ರಿಯರ ಮನಸೆಳೆಯುವುದರಲ್ಲಿ ಎರಡು ಮಾತೇ ಇಲ್ಲ ಎಂದು ಹೇಳಲಾಗುತ್ತಿದೆ.

ತಾಜ್‌ ಮಹಲ್‌ ಗೆ ರಕುಲ್‌ ಪ್ರೀತ್‌ ಸಿಂಗ್‌ – ಜಾಕಿ ಭಗ್ನಾನಿ ಭೇಟಿ

ಅಲ್ಲದೆ, ಇದು 499 ಸಿಸಿ ಸಿಂಗಲ್‌ ಸಿಲಿಂಡರ್‌ ಎಂಜಿನ್‌ ಹೊಂದಿದ್ದು, ‘ಲಡಾಕ್‌ ಟ್ರಿಪ್‌’ ಸೇರಿ ಯಾವುದೇ ದೂರದೂರಿಗೆ ಬೈಕ್‌ ಸವಾರಿ ಮಾಡುವ ಕನಸುಳ್ಳವರಿಗೆ ಹೇಳಿ ಮಾಡಿಸಿದಂತಿದೆ. ಅಂದ ಹಾಗೆ, ಕುದುರೆಯಂತಿರುವ ಹೊಸ ಬೈಕ್‌ನ ಬೆಲೆ ಸುಮಾರು 2.02 ಲಕ್ಷ ರೂ. ನಿಗದಿಪಡಿಸಲಾಗಿದೆ. ಎಂದಿನಂತೆ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಬೆಲೆ ಜಾಸ್ತಿ ಎನಿಸಿದರೂ, ಅದರ ಫೀಚರ್‌ಗಳು ಸೆಳೆಯುವುದರಲ್ಲಿ ಎರಡು ಮಾತಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...